ಶ್ರವಣಬೆಳಗೊಳ: ಕ್ಷೇತ್ರದ ಹೊರ ವಲಯದಲ್ಲಿರುವ ಚಾರುಗಿರಿ ಬೆಟ್ಟದಲ್ಲಿ ಶನಿವಾರ ಚಾರುಕೀರ್ತಿ ಶ್ರೀಗಳ 3ನೇ ವರ್ಷದ ಪುಣ್ಯಸ್ಮರಣೆಯ ನಡೆಯಿತು.

ಬೆಟ್ಟದ ಸಮಾಧಿ ಸ್ಥಳದಲ್ಲಿ ಶ್ರೀಗಳ ಪಾದುಕೆಗಳಿಗೆ ಅಭಿಷೇಕ, ಪುಷ್ಪಾರ್ಚನೆ ನೆರವೇರಿಸಲಾಯಿತು.

ಸಾನಿಧ್ಯ ವಹಿಸಿದ್ದ ಆಚಾರ್ಯ ಅನೇಕಾಂತ ಸಾಗರ ಮಹಾರಾಜರು, ‘ವೈರಾಗ್ಯ ಮೂರ್ತಿ ಭಗವಾನ್ ಬಾಹುಬಲಿಯ 4 ಮಹಾ ಮಸ್ತಕಾಭಿಷೇಕಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಚಾರುಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಲೋಕಕ್ಕೆ ಬಾಹುಬಲಿಯ ತ್ಯಾಗ ವೈರಾಗ್ಯ ಶಾಂತಿ, ಅಹಿಂಸೆ, ಮೈತ್ರಿ ಭಾವವನ್ನು ಪರಿಚಯಿಸಿದ ಹೆಗ್ಗಳಿಕೆ ಅವರದು’ ಎಂದು ಹೇಳಿದರು.

‘ಶ್ರವಣಬೆಳಗೊಳದ ಬೆಳಕಾಗಿದ್ದ ಅವರು ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಭದ್ರ ಬುನಾದಿ ಹಾಕಿದ್ದರು. ಸರ್ವ ಧರ್ಮಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು’ ಎಂದರು.

ಮೈಸೂರು, ಬೆಂಗಳೂರು, ಹಾಸನ, ಮಂಡ್ಯ ಸೇರಿದಂತೆ ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿಯ ಸದಸ್ಯ ಎಸ್.ಬಿ.ಯಶಸ್, ಆಡಳಿತ ಮಂಡಳಿಯ ಸದಸ್ಯರಾದ ಭರತೇಶ್, ಪೌದನ್, ಶ್ರೇಯಸ್, ಹೇಮಂತ್ ಕುಮಾರ್, ಜೈನ್ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಕಾರ್ಯದರ್ಶಿ ಎಸ್.ಪಿ.ಬಾನುಕುಮಾರ್, ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-36-1366980013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.