ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾ ರಥೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ–ವಿಧಾನಗಳು ಶನಿವಾರ ಆರಂಭವಾದವು.

ಕ್ಷೇತ್ರದ ಹೊರವಲಯದ ಕೆರೆಕೋಡಿ ಜಕ್ಕಳಮ್ಮ ದೇವಿ ಸನ್ನಿಧಿಯಲ್ಲಿ ನೇಮಿನಾಥ ತೀರ್ಥಂಕರರ ಕ್ಷೇತ್ರದ ಅಧಿ ದೇವತೆ ಕೂಷ್ಮಾಂಡಿನಿ ದೇವಿಗೆ ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿದವು.

22ನೇ ತೀರ್ಥಂಕರ ನೇಮಿನಾಥ ಭಗವಾನರ ಸನ್ನಿಧಿಯಲ್ಲಿ ಮಂಗಲ ಕಲಶವನ್ನು ಪ್ರತಿಷ್ಠಾಪಿಸಲಾಗಿತ್ತು. ಮಂಗಲಾಷ್ಟಕ ಣಮೋಕಾರ ಮಹಾಮಂತ್ರದೊಂದಿಗೆ ಮಂಗಲ ವಾದ್ಯಗಳು, ಭಕ್ತರ ಜಯಕಾರ ಮೊಳಗುತ್ತಿದ್ದಂತೆ ಜಲ, ಎಳನೀರು, ಕಬ್ಬನಹಾಲು, ಕ್ಷೀರ, ಕಲ್ಕಚೂರ್ಣ, ಅರಿಷಿಣ, ಕಷಾಯ, ಗಂಧ, ಅಷ್ಟಗಂಧ ಚಂದನದೊಂದಿಗೆ ಅಭಿಷೇಕ ನೆರವೇರಿಸಲಾಯಿತು.

ಪ್ರತ್ಯೇಕವಾಗಿ ಯಕ್ಷ–ಯಕ್ಷಿಯರಿಗೆ ಅರ್ಘ್ಯಗಳೊಂದಿಗೆ ಪುಷ್ಪವೃಷ್ಟಿ, ಮಹಾಶಾಂತಿಧಾರಾ, ಜಯಮಾಲಾರ್ಘ್ಯ ಸಮರ್ಪಿಸಲಾಯಿತು.

ಜಾತ್ರಾ ಮಹೋತ್ಸವದ ನಿಮಿತ್ತ ಬಸದಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಯ ಸನ್ನಿಧಿಯಲ್ಲಿ ಶ್ರಾವಕಿಯರು 108 ಬಾರಿ ಕುಂಕುಮಾರ್ಚನೆ ಮಾಡಿದರು. ಭಕ್ತರು ಸಿದ್ಧಪಡಿಸಿದ್ದ ವಿವಿಧ ಮಹಾ ನೈವೇದ್ಯವನ್ನು ದೇವಿಗೆ ಸಮರ್ಪಿಸಲಾಯಿತು.

ಸಾನಿಧ್ಯ ವಹಿಸಿದ್ದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಕ್ಷೇತ್ರದ ಪರಂಪರೆಯಂತೆ 15 ದಿನ ನಡೆಯುವ ವಾರ್ಷಿಕ ಪಂಚಕಲ್ಯಾಣ ಮತ್ತು ಮಹಾರಥೋತ್ಸವವು ಎಲ್ಲಾ ರೀತಿಯಿಂದಲೂ ನಿರ್ವಿಘ್ನವಾಗಿ ನಡೆಯಲೆಂದು ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿ (ಜಕ್ಕಳಮ್ಮ ದೇವಿ)ಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಮಹಾ ರಥೋತ್ಸವ ಏಪ್ರಿಲ್ 2ರಂದು ನಡೆಯಲಿದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯಬೇಕಾದರೆ ಮೂಲ ಸ್ವಾಮಿ ಮತ್ತು ಯಕ್ಷಿಯನ್ನು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ 42 ಬಸದಿಗಳಲ್ಲಿ ಆರಾಧನೆಗಳು, ಹೋಮ ನಡೆಯಲಿವೆ’ ಎಂದರು.

ಆಚಾರ್ಯ ಅನೇಕಾಂತ ಸಾಗರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸಂಘಸ್ಥ ತ್ಯಾಗಿಗಳು ಪಾಲ್ಗೊಂಡಿದ್ದರು.

ಸನ್ಮತಿ ಕುಮಾರ್, ನಂದಕುಮಾರ್ ಶಾಸ್ತ್ರಿ, ಜಿನೇಶ್, ಕಿರಣ್ ಕುಮಾರ್, ಎಸ್.ಪಿ.ಜ್ವಾಲಕುಮಾರ್ ರಾಜಣ್ಣ ಪೂಜೆಯ ನೇತೃತ್ವ ವಹಿಸಿದ್ದರು. ಕೂಷ್ಮಾಂಡಿನಿ ಮಹಿಳಾ ಸಮಾಜ, ದಿಗಂಬರ ಜೈನ ಸಮಾಜದವರು ಪೂಜೆ ಮತ್ತು ಭೋಜನದ ಸೇವಾಕರ್ತರಾಗಿದ್ದರು.

ಗ್ರಾಮ ಪಂಚಾಯಿತಿ ಸದಸ್ಯ ಎಸ್.ಬಿ.ಯಶಸ್, ಶಾಲಿನಿ ದೇವೇಂದ್ರಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಮೋದ್ ಕುಮಾರ್, ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಕಾರ್ಯದರ್ಶಿ ಎಸ್.ಪಿ.ಬಾನುಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಎಸ್.ವಿ.ಭರತೇಶ್, ಪೌದನ್, ಸಂಜು, ಮುಖಂಡರಾದ ಎಸ್.ಆರ್.ಲೋಕೇಶ್, ಶರತ್ ಕುಮಾರ್ ಹೊಸಹಳ್ಳಿ, ಪರಮ ಹಾಗೂ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-36-104841469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.