ಶ್ರವಣಬೆಳಗೊಳ: ಕ್ಷೇತ್ರದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಪ್ರಾಂಗಣದ ಬಾಹುಬಲಿ ಸನ್ನಿಧಿಯಲ್ಲಿ ವಿಶ್ವ ಣಮೋಕಾರ ಮಂತ್ರ ದಿವಸದ ಪ್ರಯುಕ್ತ ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪಂಚಣಮೋಕಾರ ಮಹಾ ಮಂತ್ರದ ದಿವಸವನ್ನು ಣಮೋಕಾರ ಮಂತ್ರ ಪಠಿಸಿ ಆಚರಿಸಲಾಯಿತು.

ಭಗವಾನ್ ಬಾಹುಬಲಿ ಸ್ವಾಮಿ ಸನ್ನಿಧಿಯಲ್ಲಿ ಆಸೀನರಾಗಿದ್ದ ಶ್ರಾವಕ ಶ್ರಾವಕಿಯರು ಕನ್ಯಾಶ್ರಮದ ಬಾಲಕಿಯರು ಮತ್ತು ವಿದ್ಯಾಪೀಠದ ಬಾಲಕರು ಪಾಲ್ಗೊಂಡು ಆಚಾರ್ಯ ಅನೇಕಾಂತಸಾಗರ ಮಹಾರಾಜರ ಆಶಯದಂತೆ 5 ಬಾರಿ ಣಮೋಕಾರ ಮಹಾಮಂತ್ರಗಳನ್ನು ಪಠಿಸಿದರು. ಆಚಾರ್ಯ ಅನೇಕಾಂತಸಾಗರ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಜನ್ಮ ಜನ್ಮಾಂತರದಿಂದ ಮಾಡಿದ ಪಾಪ ಕರ್ಮಗಳನ್ನು ಣಮೋಕಾರ ಮಹಾಮಂತ್ರವನ್ನು ಜಪಿಸುವುದರೊಂದಿಗೆ ನಾಶ ಮಾಡಬಹುದು. ಅಂತಹ ಅದ್ಭುತ ಶಕ್ತಿ ಈ ಮಂತ್ರದಲ್ಲಿ ಅಡಗಿದೆ ಎಂದು ಹೇಳಿದರು.

ಭಗವಂತನ ಸನ್ನಿಧಿಯಲ್ಲಿ ನಿತ್ಯ ಪಂಚ ಣಮೋಕಾರ ಮಹಾಮಂತ್ರಗಳನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ ಧೈರ್ಯ, ಶಕ್ತಿ, ವಿಶ್ವಾಸ ನಂಬಿಕೆಗಳು ಬಲಗೊಂಡು ಹಿಡಿದ ಕಾರ್ಯಗಳು ಯಶಸ್ವಿಯಾಗಲು ಸಹಕಾರಿಯಾಗುತ್ತದೆ ಎಂದರು.

ಪ್ರತಿವರ್ಷ ಏ. 9ರಂದು ವಿಶ್ವದ ಎಲ್ಲಾ ಜಿನ ಬಸದಿ ಮಂದಿರಗಳಲ್ಲಿ ಸಾನ್ನಿಧ್ಯ ವಹಿಸಿರುವ ತ್ಯಾಗಿಗಳ ಸಮ್ಮುಖದಲ್ಲಿ ಶ್ರಾವಕ ಶ್ರಾವಕಿಯರು ಶ್ರದ್ಧಾ ಭಕ್ತಿಯಿಂದ ಪಂಚಣಮೋಕಾರ ಮಹಾಮಂತ್ರ ದಿವಸವನ್ನು ಆಚರಿಸುತ್ತಾರೆ ಎಂದು ರಾಜೇಶ್ ಶಾಸ್ತ್ರಿ ಹೇಳಿದರು. ಅನುಪಮ ಸಾಗರ ಮಹಾರಾಜರು ಆತ್ಮೀಯ ಸಾಗರ ಮಹಾರಾಜರು, ಅರಹಂತ ಸಾಗರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಮೋದ್ ಕುಮಾರ್, ಕಾರ್ಯದರ್ಶಿ ಬಬನ್ ಪಿ. ದತ್ತವಾಡೆ, ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-36-557993473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.