ಶ್ರವಣಬೆಳಗೊಳ: ಶಿವಮೊಗ್ಗ ಜಿಲ್ಲೆಯ ಹೊಂಬುಜ ಅತಿಶಯ ಕ್ಷೇತ್ರದಲ್ಲಿ ಕ್ಷೇತ್ರದ ಅದಿದೇವತೆ ಪದ್ಮಾವತಿ ದೇವಿಯ ವಾರ್ಷಿಕ ಮಹಾರಥೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿದ ಪ್ರಯುಕ್ತ ಕ್ಷೇತ್ರದಲ್ಲಿ ಪರಂಪರೆಯಂತೆ ಬೆಂಗಳೂರು ರಸ್ತೆಯಲ್ಲಿರುವ ಲಕ್ಕಿ ಬನದಲ್ಲಿ ಪದ್ಮಾವತಿ ದೇವಿ ಹಾಗೂ ನಾಗದೇವರಿಗೆ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ಲಕ್ಕಿ ಬನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪೀಠದಲ್ಲಿ 23ನೇ ತೀರ್ಥಂಕರರಾದ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಯಕ್ಷ ಧರಣೇಂದ್ರ ಯಕ್ಷಿ ಪದ್ಮಾವತಿ ದೇವಿಯನ್ನು ಸ್ಥಾಪಿಸಿ ತೀರ್ಥಂಕರರಿಗೆ ಯಕ್ಷ ಯಕ್ಷಿಗೆ ಮತ್ತು ನಾಗದೇವರಿಗೆ ಪ್ರತ್ಯೇಕವಾಗಿ ಜಲ, ಗಂಧ, ಎಳನೀರು ಕ್ಷೀರ, ಕಲ್ಕಚೂರ್ಣ, ಅರಿಸಿನ, ಅಷ್ಟಗಂಧ, ಚಂದನದೊಂದಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಚತುಷ್ಕೋನ ಮಂಗಲ ಕಲಶಗಳಿಂದ ಅಭಿಷೇಕ ನಡೆದ ನಂತರ ಪುಷ್ಪವೃಷ್ಠಿ ನೆರವೇರಿಸಿ ಶಾಂತಿಧಾರವನ್ನು ಮಹಾಮಂತ್ರಗಳೊಂದಿಗೆ ನಡೆಸಲಾಯಿತು. ಅನೇಕ ತರಹದ ಹೂಗಳಿಂದ ಧರಣೇಂದ್ರ ಮತ್ತು ಪದ್ಮಾವತಿ ದೇವಿಯನ್ನು ವಿಶೇಷ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಪದ್ಮಾವತಿ ದೇವಿಗೆ ಷೋಡಷೋಪಚಾರ ಪೂಜೆ ನಡೆಸಲಾಯಿತು. ನಂತರ ದೇವಿಗೆ ಉಡಿ ತುಂಬಲಾಯಿತು. ಭಾಗವಹಿಸಿದ್ದ ಶ್ರಾವಕಿಯರು ಸಹ ಸರದಿ ಸಾಲಿನಲ್ಲಿ ನಿಂತು ದೇವಿಗೆ ಉಡಿ ತುಂಬಿಸಿ ಉಡಿಯ ಹಾಡುಗಳನ್ನು ಹೇಳಿ ತಮ್ಮ ಭಕ್ತಿ ಸಮರ್ಪಿಸಿ ಜಯಘೋಷ ಮೊಳಗಿಸಿದರು. ಮಹಾ ಮಂಗಳಾರತಿ ನಂತರ ಗಂಧೋದಕ ಫಲ ಪ್ರಸಾದ ವಿನಿಯೋಗ ಮಾಡಲಾಯಿತು.

ದಿವಂಗತ ಸರೋಜಮ್ಮ ಮತ್ತು ಡಿ ಪದ್ಮಯ್ಯ ಕುಟುಂಬದ ಪೂರ್ಣಿಮಾ ಅನಂತ ಪದ್ಮನಾಭ್ ಪೂಜೆಯ ಹಾಗು ಭೋಜನದ ಸೇವಾ ಕರ್ತರಾಗಿದ್ದು, ಪೂಜೆಯ ನೇತೃತ್ವವನ್ನು ಎಸ್.ಪಿ.ಜೀವೇಂದ್ರ ಕುಮಾರ್ ಶಾಸ್ತ್ರಿ ರಾಜಣ್ಣ ವಹಿಸಿದ್ದರು. ಭಂಡಾರಬಸದಿಯಲ್ಲಿ ಮೂಲ ಮೂರ್ತಿ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಧಾರ್ಮಿಕ ವಿಧಿಗಳನ್ನೂ ಸಹ ಪ್ರತಿಷ್ಠಾಚಾರ್ಯ ಎಸ್. ಪಿ.ಜಿನೇಶ್ ನೇತೃತ್ವದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಉತ್ಸವ ಮೂರ್ತಿಗಳನ್ನು ಲಕ್ಕಿಬನದ ವರೆಗೆ ಮಂಗಲವಾದ್ಯದೊಂದಿಗೆ ಕೊಂಡೊಯ್ಯಲಾಯಿತು. ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಅಲಂಕರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ಭವ್ಯ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.