ಶ್ರವಣಬೆಳಗೊಳ: ಕ್ಷೇತ್ರದ ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಪ್ರಯುಕ್ತ ಇಲ್ಲಿನ ಹೊರವಲಯದ ಜಿನನಾಥಪುರದಲ್ಲಿರುವ ಶಾಂತಿನಾಥ ಬಸದಿಯ ಶಾಂತಿನಾಥಸ್ವಾಮಿಗೆ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರದ್ಧಾ, ಭಕ್ತಿಯಿಂದ ನೆರವೇರಿಸಲಾಯಿತು.

ಪದ್ಮಾಸನದಲ್ಲಿ ವಿರಾಜಮಾನರಾಗಿರುವ ಶಾಂತಿನಾಥ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಪಂಚಾಮೃತ ಅಭಿಷೇಕಗಳು ಪ್ರಾರಂಭವಾಗುತ್ತಿದ್ದಂತೆ ಮಂಗಲವಾದ್ಯಗಳೊಂದಿಗೆ ಮಹಾಮಂತ್ರಗಳು ಮೊಳಗಿದವು.

ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪುಷ್ಪಾರ್ಚನೆಯೊಂದಿಗೆ ಮಹಾಶಾಂತಿಧಾರ ನೆರವೇರಿತು. ಮಹಾಮಂಗಳಾರತಿ ಆದ ನಂತರ ಬಂದವರಿಗೆ ಗಂಧೋದಕ, ಶ್ರೀಫಲ ಪ್ರಸಾದ ವಿತರಿಸಲಾಯಿತು.

ಆಶೀರ್ವಚನ ನೀಡಿದ ಸಾನ್ನಿಧ್ಯ ವಹಿಸಿದ್ದ ಆಚಾರ್ಯ ಅನೇಕಾಂತಸಾಗರ ಮಹಾರಾಜರು, ‘ಯಾರು ಕ್ರೋಧ, ಲೋಭಗಳನ್ನು ಸಂಪೂರ್ಣವಾಗಿ ಅಂತರಂಗದಿಂದ ತ್ಯಜಿಸುತ್ತಾರೋ ಅಂತಹವರಲ್ಲಿ ಮಾತ್ರ ಶಾಂತಿ, ಮಾತೃವಾತ್ಸಲ್ಯ ಭಾವನೆ ಬರುತ್ತದೆ’ ಎಂದು ಹೇಳಿದರು.

ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಎಸ್.ಎಸ್.ವಿಮಲ್ ಕುಮಾರ್, ನವೀನ್ ಕುಮಾರ್ ಪೂಜೆಯ ನೇತೃತ್ವ ವಹಿಸಿದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಾಲಿನಿ ದೇವೇಂದ್ರ ಕುಮಾರ್, ಎಸ್.ಬಿ.ಯಶಸ್, ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಮೋದ್ ಕುಮಾರ್, ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಕಾರ್ಯದರ್ಶಿ ಎಸ್.ಪಿ. ಭಾನುಕುಮಾರ್, ಎಸ್ಡಿಜೆಎಂಐ ಆಡಳಿತ ಮಂಡಳಿಯ ಸದಸ್ಯರಾದ ಭರತೇಶ್, ಪೌದನ್, ಹೇಮಂತ್, ಶ್ರೇಯಸ್, ಸಂಜು, ಕಿರಣ್ ಕುಮಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-36-605865284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.