ಸುಂಟಿಕೊಪ್ಪ: ಕೊಡಗರಹಳ್ಳಿ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ನಡೆದ ಮಹಾವಿಷ್ಣು, ಚಾಮುಂಡೇಶ್ವರಿ, ರಕ್ತೇಶ್ವರಿ ಹಾಗೂ ಪರಿವಾರ ದೇವರುಗಳ ನೇಮೋತ್ಸವವು ಬುಧವಾರ ಸಂಪನ್ನಗೊಂಡಿತು.

ಸಮಿತಿ 45ನೇ ವಾರ್ಷಿಕ ಮಹೋತ್ಸವ, ಮೂರು ದಿನ ನೇಮೋತ್ಸವ ಆಯೋಜಿಸಿತ್ತು, ಸೋಮವಾರ ಬೆಳಿಗ್ಗೆ ಗಣಪತಿ ಹೋಮ ಮತ್ತು ಕೊಡಿ (ಬಾವುಟ) ಏರಿಸುವುದರೊಂದಿಗೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಅಂದು ರಾತ್ರಿ ದೀಪರಾಧನೆ, ಏಳು ಸುತ್ತಿನ ಪ್ರದಕ್ಷಿಣೆ ಹಾಗೂ ಚೆಂಡೆ ಮೇಳ ನಡೆಯಿತು.
ಮಂಗಳವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆ, ರಾತ್ರಿ ಚಾಮುಂಡೇಶ್ವರಿ ಕೋಲ, ಅಣ್ಣಪ್ಪ ಕೋಲ, ರಕ್ತೇಶ್ವರಿ ಕೋಲಗಳು ನಡೆದವು. ರಾತ್ರಿ ಸುಡುಮದ್ದು ಪ್ರದರ್ಶನ ಆಕರ್ಷಕವಾಗಿತ್ತು.

ಬುಧವಾರ ಬೆಳಿಗ್ಗೆ ವಿಷ್ಣುಮೂರ್ತಿ ಕೋಲ ನಡೆದು ಬೆಂಕಿಗೆರೆಗುವ ಮೂಲಕ ತನ್ನ ಕಾರಣಿಕವನ್ನು ಭಕ್ತರ ಮುಂದೆ ಪ್ರದರ್ಶಿಸಿತು. ಅಜ್ಜಪ್ಪ ಕೋಲ, ರಕ್ತೇಶ್ವರಿ ಕೋಲ, ಚಾಮುಂಡೇಶ್ವರಿ ಕೋಲಗಳು ನಡೆದವು, ಭಕ್ತರು ಇಷ್ಟ ದೈವಕ್ಕೆ ಹರಕೆ ಒಪ್ಪಿಸಿದರು.

ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಮಡಿಕೇರಿ, ಕುಶಾಲನಗರ, ಸುಳ್ಯ, ಪುತ್ತೂರು, ಮಂಗಳೂರು, ಮುಂಬೈ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿ, ದೈವ ದರ್ಶನ ಪಡೆದರು. ನೈವೇದ್ಯ ಪೂಜೆಯೊಂದಿಗೆ ನೇಮೋತ್ಸವ ಸಂಪನ್ನಗೊಂಡಿತು. ಭಕ್ತರಿಗೆ ಎರಡು ದಿನ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.