ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸ್ವರೂಪ್‌ಗೆ ಜಿ.ಪಂ ಉಪಾಧ್ಯಕ್ಷ ಯೋಗ

ಮಾಜಿ ಶಾಸಕ ದಿ. ಪ್ರಕಾಶ್‌ ಪುತ್ರನಿಗೆ ಒಲಿದ ಅದೃಷ್ಟ
Last Updated 24 ಮೇ 2019, 14:22 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಕಂದಲಿ ಕ್ಷೇತ್ರದ ಸದಸ್ಯ ಎಚ್.ಪಿ.ಸ್ವರೂಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಕ್ಷದ ಆಂತರಿಕ ಒಪ್ಪಂದದಂತೆ ಉಪಾಧ್ಯಕ್ಷರಾಗಿದ್ದ ಸುಪ್ರದೀಪ್ ಯಜಮಾನ್ ತಮ್ಮ ಸ್ಥಾನಕ್ಕೆ ಏ. 24 ರಂದು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು.

ಪ್ರಾದೇಶಿಕ ಆಯುಕ್ತ ಅನಿಲ್‌ ಕುಮಾರ್ ಅವರು ಚುನಾವಣಾ ಕಾರ್ಯ ನಿರ್ವಹಿಸಿದರು. ಬೆಳಗ್ಗೆ 10.30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜೆಡಿಎಸ್‌ನ ಸ್ವರೂಪ್ ಮಾತ್ರ ಎರಡು ಸೆಟ್ ನಾಮ ಪತ್ರ ಸಲ್ಲಿಸಿದ್ದರು. ನಾಮಪತ್ರಕ್ಕೆ ಸದಸ್ಯರಾದ ಮಮತಾ ಹಾಗೂ ಪುಟ್ಟಸ್ವಾಮಿ ಗೌಡ ಸೂಚಕರಾಗಿ ಸಹಿ ಮಾಡಿದ್ದರು.

ನಾಮಪತ್ರ ಹಿಂಪಡೆಯಲು 5 ನಿಮಿಷ ಅವಕಾಶ ನೀಡಿದಾಗ ಹಿಂಪಡೆಯದ ಕಾರಣ ಸ್ವರೂಪ್‌ ಅವರನ್ನು ನೂತನ ಉಪಾಧ್ಯಕ್ಷರಾಗಿ ಘೋಷಿಸಿ, 2021ರ ಜೂನ್‌ 2 ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.

40 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ 27 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷೆ ಶ್ವೇತಾ ದೇವರಾಜ್‌, ಭವಾನಿ ರೇವಣ್ಣ, ಮಂಥರ್‌ ಗೌಡ ಸೇರಿದಂತೆ ಹಲವು ಸದಸ್ಯರು ಗೈರು ಹಾಜರಾಗಿದ್ದರು.

ನೂತನ ಉಪಾಧ್ಯಕ್ಷರನ್ನು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಕೆ.ಎನ್.ವಿಜಯ ಪ್ರಕಾಶ್‌, ಜಿಲ್ಲಾ ಪಂಚಾಯಿತಿ ಸದಸ್ಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅಭಿನಂದಿಸಿದರು.

ಮೊದಲ ಅವಧಿಗೆ ಕೊಣನೂರು ಕ್ಷೇತ್ರದ ಸದಸ್ಯ ಶ್ರೀನಿವಾಸ್‌ ಅವರು ಎರಡು ವರ್ಷ, ಎರಡನೇ ಅವಧಿಗೆ ಹಾನುಬಾಳು ಕ್ಷೇತ್ರದ ಸುಪ್ರದೀಪ್‌ ಒಂದು ವರ್ಷ ಉಪಾಧ್ಯಕ್ಷರಾಗಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಅವರು ಪಕ್ಷದ ಸದಸ್ಯರು ಹಾಗೂ ಮುಖಂಡರ ಜತೆ ಚರ್ಚೆ ನಡೆಸಿ, ಮಾಜಿ ಶಾಸಕ, ದಿ. ಎಚ್‌.ಎಸ್‌.ಪ್ರಕಾಶ್‌ ಅವರ ಪುತ್ರ ಸ್ವರೂಪ್‌ ಆಯ್ಕೆಗೆ ನಿರ್ಧರಿಸಿದರು.

ನಾಲ್ಕು ಬಾರಿ ಹಾಸನ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್‌.ಎಸ್.ಪ್ರಕಾಶ್‌ ಅವರು ದೇವೇಗೌಡರ ಕುಟುಂಬ ಹಾಗೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದರು. ಸಚಿವ ಸ್ಥಾನಕ್ಕೂ ಒತ್ತಡ ಹೇರಿರಲಿಲ್ಲ. ಅವರ ಹಠಾತ್‌ ನಿಧನದಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ಸ್ವರೂಪ್‌ ಆಯ್ಕೆಗೆ ಒಲವು ತೋರಲಾಗಿದೆ ಎಂದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT