ಸ್ವಯಂ ಉದ್ಯೋಗದಲ್ಲಿ ಪರಿಣತರಾಗಿ

7
ಶಾಸಕ ಪ್ರೀತಂ ಜೆ.ಗೌಡ ವಿದ್ಯಾರ್ಥಿಗಳಿಗೆ ಸಲಹೆ

ಸ್ವಯಂ ಉದ್ಯೋಗದಲ್ಲಿ ಪರಿಣತರಾಗಿ

Published:
Updated:
Deccan Herald

ಹಾಸನ : ಗುರಿ ತಲುಪುವ ಆಲೋಚನೆ ಇದ್ದಲ್ಲಿ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಶಾಸಕ ಪ್ರೀತಂ. ಜೆ.ಗೌಡ ಹೇಳಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ತಿಳುವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರಿಶ್ರಮದಿಂದ ಕಲಿತರೆ ಮಾತ್ರ ಅನುಕೂಲ ಆಗುವುದು. ಪದವಿ ಪಡೆದು ನೌಕರಿ ಪಡೆಯುವುದರ ಜತೆಗೆ ಸ್ವಯಂ ಉದ್ಯೋಗ ಮಾಡುವ ನಿಟ್ಟಿನಲ್ಲಿ ಪರಿಣತರಾಗಬೇಕು. ಸರ್ಕಾರ ಹೊಸ ಎಂಜಿನಿಯರಿಗ್ ಕಾಲೇಜು ಆರಂಭಕ್ಕೆ ಅನುಮತಿ ನೀಡುತ್ತಿದೆ. ಅದಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಕೆ.ಎಸ್. ಜಯಂತ್ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗವಿದೆ ಮತ್ತು ಎಲ್ಲ ಸೌಕರ್ಯ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಗ್ರಂಥಾಲಯ, ಉತ್ತಮ ಲ್ಯಾಬ್ ಒಳಗೊಂಡಿದೆ. ಕ್ರೀಡಾ ಚಟುವಟಿಕೆಗಳಿಗೂ ಸೌಕರ್ಯ ಕಲ್ಪಿಸಿಕೊಡಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರಿನ ಟಿ.ಸಿ.ಎಸ್ ಮುಖ್ಯಸ್ಥ ಶ್ರೀನಿವಾಸ್ ರಾಮಾನುಜಂ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಬಹಳ ಶ್ರಮದಿಂದ ಕಲಿಯಬೇಕಾಗಿದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ತಿಳುವಳಿಕೆ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಬೇಕಾದರೆ ಏಕಾಗ್ರತೆಯಿಂದ ಕಲಿಕೆಯ ಕಡೆಗೆ ಗಮನ ನೀಡಬೇಕು ಎಂದರು.

ಬೆಂಗಳೂರಿನ ಕ್ವಾಡಜೈನ್ ವೈರ್ ಲೆಸ್ ಸಲ್ಯೂಷನ್ ಪ್ರೈವೆಟ್ ಲಿಮಿಟೆಡ್ ಮುಖ್ಯಸ್ಥ ಧನಂಜಯ ಮಾತನಾಡಿ, ಎಂಜಿನಿಯರಿಂಗ್ ಪದವಿಯಲ್ಲಿ ಯಾವುದೇ ವಿಷಯ ಅಧ್ಯಯನ ನಡೆಸಿದರು ಹೆಚ್ಚಿನ ಅಂಕ ಗಳಿಸುವ ಮೂಲಕ ಸಾಧನೆ ಮಾಡಿದವರಿಗೆ ಮಾತ್ರ ಕಂಪನಿಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಪರಿಶ್ರಮ ಮತ್ತು ಜ್ಞಾನ ವಿಕಾಸ ಹೆಚ್ಚಾಗಿದ್ದಲ್ಲಿ ಮಾತ್ರ ಉತ್ತಮ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಆರ್.ಟಿ ದೇವೇಗೌಡ, ಖಜಾಂಚಿ ಶೇಷಗಿರಿ, ನಿರ್ದೇಶಕ ವೆಂಕರಾಮ್, ಬಿ.ಕೆ ಮಂಜುನಾಥ, ಕೆ.ಎಂ. ಶಿವಣ್ಣ, ಸಿ.ಆರ್. ಜಗದೀಶ್ ಹಾಗೂ ಸಂಸ್ಥೆಯ ಮ್ಯಾನೇಜರ್ ಶಿವರಾಮ್, ಕೃಷ್ಣಯ್ಯ ಕಾಲೇಜಿನ ಉಪಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ್ ಮತ್ತು ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !