ಅರಸೀಕೆರೆ: ‘ದೇವಸ್ಥಾನಗಳು ಮನುಷ್ಯನ ಒತ್ತಡದ ಬದುಕಿನ ನಡುವೆ ಮಾನಸಿಕ ನೆಮ್ಮದಿ ನೀಡುವ ತಾಣಗಳಾಗಿದ್ದು ದೇವಾಲಯಗಳು ಗ್ರಾಮೀಣ ಭಾಗದ ನ್ಯಾಯಾಲಯಗಳಾಗಿವೆ’ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಾರನಹಳ್ಳಿಯಲ್ಲಿ ಭಾನುವಾರ ಮಳೆಮಲ್ಲೇಶ್ವರ ಸ್ವಾಮಿ ನೂತನ ದೇವಾಲಯದ ಶಿಖರ ಕಳಸ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

‘ಪ್ರತಿ ಗ್ರಾಮದಲ್ಲಿ ದೇವಸ್ಥಾನಗಳು ತಮ್ಮದೇ ವಿಶೇಷ ಸ್ಥಾನಗಳನ್ನು ಅಲಂಕರಿಸುವುದರ ಮೂಲಕ ಜನರನ್ನು ಭಕ್ತಿ, ನಂಬಿಕೆ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡುತ್ತವೆ. ಮನುಷ್ಯನ ಅತಿ ಆಸೆಯ ನಾಗಲೋಟವನ್ನು ಧರ್ಮ ಎಚ್ಚರಿಸುವ ಕೆಲಸ ಮಾಡುತ್ತದೆ.ಮನುಷ್ಯರು ಯಾವಾಗಲೂ ಗುರುಹಿರಿಯರು ಹಾಗೂ ದೇವರುಗಳ ನಂಬಿಕೆಯ ಆಧಾರದ ಮೇಲೆ ಸುಸಂಸ್ಕೃತ ಬದುಕು ಸಾಗಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ದೊಡ್ಡೇನಹಳ್ಳಿ ಗ್ರಾಮದ ಸಿದ್ಧರಾಮೇಶ್ವರ ಸ್ವಾಮಿಯ ಮೂರ್ತಿಯ ಸಮ್ಮುಖದಲ್ಲಿ ಮಳೆ ಮಲ್ಲೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಗಣಪತಿ ಪೂಜೆ, ಪಂಚಕಲಶ, ನವಗ್ರಹ ಪೂಜೆ ಹಾಗೂ ಮಹಾರುದ್ರಾಭಿಷೇಕ ನಡೆದವು. ನಂತರ ನೂತನ ದೇವಾಲಯದ ಕಳಸ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಳೆಮಲ್ಲೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಸೇವಾ ಮಂಡಳಿಯ ಅಧ್ಯಕ್ಷ, ಸದಸ್ಯರು ಹಾಗೂ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.