ಹೆತ್ತೂರು: ಹೋಬಳಿಯ ಹೊಂಗಡಹಳ್ಳ ಗ್ರಾಮದ ಏಲಕ್ಕಿ ತೋಟದಲ್ಲಿ ಮನೆ ಬಳಕೆಗೆ ಸೌದೆ ಕಡಿದಿರುವ ಬೆಳೆಗಾರರ ಮೇಲೆ ಅರಣ್ಯ ಇಲಾಖೆ ದೂರು ದಾಖಲಿಸಿರುವುದನ್ನು ಖಂಡಿಸಿ ಬೆಳೆಗಾರರು ಭಾನುವಾರ ಸಭೆ ನಡೆಸಿದರು.

ಈ ಭಾಗದ ಬಹುಮುಖ್ಯ ವಾಣಿಜ್ಯ ಬೆಳೆಯಾಗಿದ್ದ ಏಲಕ್ಕಿಗೆ ಕಳೆದ ಎರಡು ದಶಕಗಳಿಂದ ಔಷಧವಿಲ್ಲದ ಕೊಳೆ ಹಾಗೂ ಕೊಕ್ಕೆರೋಗ ಆವರಿಸಿರುವುದರಿಂದ ಜಮೀನಿದ್ದರು ಬೆಳೆ ಬೆಳೆಯಲಾಗದೆ. ಜೀವನ ನಡೆಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಕುಟುಂಬಕ್ಕೂ ಸರ್ಕಾರ ನೀಡಿರುವ ಬಿಪಿಎಲ್ ಕಾರ್ಡ್ ನೀಡಿದೆ. ಇದರಿಂದ ದೊರೆಯುವ ಅಕ್ಕಿಯಿಂದ ಊಟ ಮಾಡುವ ಪರಿಸ್ಥಿತಿ ಬಂದಿದೆ.

ದಟ್ಟ ಮರಗಳಡಿ ಬೆಳೆಯುವ ಏಲಕ್ಕಿ ತೋಟಗಳಲ್ಲಿನ ಸಾಕಷ್ಟು ಮರದ ರಂಬೆಗಳನ್ನು ತೆಗೆದು ಇತ್ತೀಚೆಗೆ ಕಾಫಿ ತೋಟ ಮಾಡಲು ಹೆಚ್ಚಿನ ಏಲಕ್ಕಿ ಬೆಳೆಗಾರರು ಆಸಕ್ತಿ ತೋರುತ್ತಿದ್ದಾರೆ. ಆದರೆ, ಸರ್ಕಾರ ಕಾಫಿ ತೋಟದಲ್ಲಿ ಮರ ಹಾಗೂ ಸೌದೆ ಕಡಿಯಲು ಅನುಮತಿ ನೀಡಿದೆ.

ಏಲಕ್ಕಿತೋಟದಲ್ಲಿ ಇದಕ್ಕೆ ನಿಷೇಧವಿದೆ ಎನ್ನುತ್ತಿರುವ ಯಸಳೂರು ಅರಣ್ಯ ಇಲಾಖೆ ಅಧಿಕಾರಿಗಳು, ಕಾಫಿ ತೋಟ ಮಾಡುವ ಉದ್ದೇಶದಿಂದ ಮರದ ರಂಬೆಗಳನ್ನು ಕಡಿದು ಸೌದೆ ಮಾಡಿದ್ದ ಚಂದ್ರಶೇಖರ್, ಸಂದೀಪ್, ಗೋವಿಂದೇಗೌಡ ಸೇರಿದಂತೆ ನಾಲ್ವರು ಬೆಳೆಗಾರರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಬೆಳವಣಿಗೆ ಮುಂದುವರಿದರೆ ಬೆಳೆಗಾರರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಈ ಭಾಗದ ಜನರ ಸಂಕಷ್ಟದ ಅರಿವಿದ್ದರೂ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸುತ್ತಿರುವುದನ್ನು ಖಂಡನೀಯ. ಸಂಕಷ್ಟದಲ್ಲಿರುವ ಈ ಭಾಗದ ಜನರ ನೆರವಿಗೆ ನಿಲ್ಲಬೇಕಿರುವ ಜನಪ್ರತಿನಿಧಿಗಳು ಜಾಣಮೌನ ವಹಿಸಿದ್ದಾರೆ. ಆದ್ದರಿಂದ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಮುಂದಿನ ದಿನಗಳಲ್ಲಿ ಸುದೀರ್ಘ ಹೋರಾಟ ಅನಿವಾರ್ಯ ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಜೆ ಸಚ್ಚಿನ್, ಕಾರ್ಯದರ್ಶಿ ದೇವರಾಜ್, ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೆರ್ಶಕ ಶ್ರೀಧರ್, ಎಚ್.ಟಿ. ಮಲೇಶ್ ವನಗೂರು, ಮುಖಂಡರಾದ ಪರಮೇಶ್, ಸುಧಾಕರ್, ನಾಗಭೂಷಣ್, ಮಲ್ಲೇಶ್ ಹಾಗೂ ಹೊಂಗಡಹಳ್ಳ ಸುತ್ತಾಮುತ್ತಲಿನ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.