ಅರಸೀಕೆರೆ: ನಗರದ ಶಿವಾಜಿ ಕಾಲೊನಿಯಲ್ಲಿ ನೆಲೆಸಿರುವ ಮೆಳೆಯಮ್ಮ ಹಾಗೂ ಚಿಕ್ಕಮ್ಮ ದೇವತೆಯರ ರಥೋತ್ಸವ ಭಾನುವಾರ ವೈಭವದಿಂದ ನೆರವೇರಿತು.

ಡಿ. 23ರಿಂದ ಆರಂಭವಾದ ಜಾತ್ರಾ ಮಹೋತ್ಸವದ ಡಿ. 26ರಂದು ಕರಿಯಮ್ಮ ದೇವಿ ಹಾಗೂ ಮಲ್ಲಿಗೆಮ್ಮ ದೇವಿ ಹಾಗೂ ಧೂತರಾಯಸ್ವಾಮಿ ಮತ್ತು ಕೆಂಚರಾಯ ಸ್ವಾಮಿ, ಚಲುವರಾಯಸ್ವಾಮಿ ದೇವತೆಗಳ ಸಮ್ಮುಖದಲ್ಲಿ ಮಧ್ಯಾಹ್ನ ನಗರದ ಸಂತೆ ಮೈದಾನದಲ್ಲಿ ರಥೋತ್ಸವ ವಿಜೃಂಭಣೆ ಯಿಂದ ನಡೆಯಿತು. ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು ಸಮರ್ಪಿಸಿ ದೇವಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಡಿ. 23ರಂದು ಮದುವಣಿಗೆ ಶಾಸ್ತ್ರ, ಜಾತ್ರೆ ಬೀದಿಯಲ್ಲಿ ಮೆರವಣಿಗೆ, ಡಿ. 24 ರಂದು ಮೆಳೆಯಮ್ಮ ದೇವಿಯ ಮೂಲ ಸನ್ನಿಧಿಯಲ್ಲಿ ಬನ್ನಿಮರ ಹತ್ತುವ ಉತ್ಸವ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ದೇವಿಯವರ ಸಿಡಿ ಉತ್ಸವ, ಡಿ. 25 ರಂದು ಸಂಜೆ ಐತಿಹಾಸಿಕ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಗಂಗಾಪೂಜೆ, ಬಳಿಕ ಮಂಗಳವಾದ್ಯ ಮತ್ತು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಗ್ರಾಮ ದೇವತೆಗಳಾದ ಕರಿಯಮ್ಮ ದೇವಿ ಹಾಗೂ ಮಲ್ಲಿಗೆಮ್ಮ, ಮೆಳೆಯಮ್ಮ ಮತ್ತು ಚಿಕ್ಕಮ್ಮ ದೇವಿಯರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನೆರವೇರಿತು.

ಶಾಸಕ ಕೆ.ಎಂ. ಶಿವಲಿಂಗೇಗೌಡ ದೇವಿಗೆ ಪೂಜೆ ಸಲ್ಲಿಸಿ ರಥಕ್ಕೆ ಈಡುಗಾಯಿ ಸಮರ್ಪಿಸಿದರು.

ಜೆಡಿಎಸ್ ಮುಖಂಡರು, ಬಿಜೆಪಿ ಮುಖಂಡರಾದ ಎನ್.ಆರ್. ಸಂತೋಷ್, ವಿಜಯವಿಕ್ರಮ್, ವಿದ್ಯಾಧರ್, ಲಾಳನಕೆರೆ ಯೋಗೀಶ್, ಮೆಳೆಯಮ್ಮ ದೇವಿ ಹಾಗೂ ಚಿಕ್ಕಮ್ಮ ದೇವಿ ಸೇವಾ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ
ಮುಖಂಡರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.