ಅರಸೀಕೆರೆ: ಹೋಬಳಿ ಗಡಿ ಭಾಗ ಸೇರಿದಂತೆ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಹೊಸಕೋಟೆ, ಉಚ್ಚಂಗಿದುರ್ಗ, ಅಣಜಿಗೆರೆ, ಹಿರೇಮೆಗಳಗೆರೆ ವ್ಯಾಪ್ತಿಯಲ್ಲಿ ಆಗಾಗ್ಗೆ ಮಳೆ ಸುರಿಯಿತು.
ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ರೈತರು ಎಡೆಕುಂಟೆ, ಕಳೆ, ಯೂರಿಯಾ ಸಿಂಪಡಣೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತ್ತು. ಬಿಡುವು ಬಳಿಕ ಶುರುವಾದ ಮಳೆ ರೈತರ ಉತ್ಸವಕ್ಕೆ ಕಾರಣವಾಗಿದೆ.