ನಗರದಲ್ಲಿ ಸರಣಿ ಕಳ್ಳತನ

7
ನಾಲ್ಕು ಮನೆಗಳಲ್ಲಿ ಚಿನ್ನಾಭರಣ, ನಗದು ಕಳವು

ನಗರದಲ್ಲಿ ಸರಣಿ ಕಳ್ಳತನ

Published:
Updated:
ಹಾಸನದ ವಿವೇಕ ನಗರದಲ್ಲಿ ಮನೆಯ ಬೀಗ ಮುರಿದಿರುವ ಕಳ್ಳರು

ಹಾಸನ: ಇಲ್ಲಿನ ವಿವೇಕ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು, ಚಿನ್ನಾಭರಣ ಮತ್ತು ನಗದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಕಳ್ಳರು ಕಬ್ಬಿಣದ ಸರಳು, ಕಲ್ಲುಗಳನ್ನು ಬಳಸಿ ಕೃತ್ಯ ಎಸಗಿದ್ದಾರೆ.

ಬಡಾವಣೆಯ ಎರಡನೇ ಹಂತದ ನಿವಾಸಿ ಸಂತೋಷ್ ಮತ್ತು ಶಶಿಕಲಾ ದಂಪತಿ ತಿರುಪತಿಗೆ ತೆರಳಿದ್ದರು. ಅವರ ಮನೆಯ ಬೀಗ ಮುರಿದು ಲಾಕರ್‌ನಲ್ಲಿಟ್ಟಿದ್ದ ₹ 50 ಸಾವಿರ ಮತ್ತು ಎರಡು ಚಿನ್ನದ ಸರ ದೋಚಿದ್ದಾರೆ. ಪಕ್ಕದ ಮನೆಯವರು ದಂಪತಿಗೆ ಕೃತ್ಯದ ಮಾಹಿತಿ ತಿಳಿಸಲು ಯತ್ನಿಸಿದರು. ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಅವರ ಸಂಬಂಧಿ ಮನೆಗೆ ಬಂದು ವಸ್ತುಗಳು ಚೆಲ್ಲಾಪಿಲ್ಲಿ ಆಗಿದ್ದನ್ನು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅದೇ ಬಡಾವಣೆಯ ಜ್ಯೋತಿ ಅವರ ಮನೆ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ ₹ 4 ಸಾವಿರ ಕಳವು ಮಾಡಲಾಗಿದೆ. ನಿರ್ಮಾಣ ಹಂತದಲ್ಲಿದ್ದ ಮತ್ತೊಂದು ಮನೆ ಬೀಗ ಒಡೆದು ಒಳ ಪ್ರವೇಶಿಸಿದ್ದಾರೆ. ಅಲ್ಲಿ ಯಾವುದೇ ವಸ್ತು ಸಿಕ್ಕಿಲ್ಲ.
ಜ್ಯೋತಿ ಅವರ ಪಕ್ಕದ ಮನೆಯಲ್ಲಿಯೂ ಕೃತ್ಯ ಎಸಗಿದ್ದು,  ಮಾಲೀಕರು ಊರಿನಲ್ಲಿ ಇಲ್ಲದ ಕಾರಣ ಕಳವು ಆಗಿರುವ ವಸ್ತುಗಳ ಮೌಲ್ಯ ಗೊತ್ತಾಗಿಲ್ಲ.

ಶುಕ್ರವಾರ ಮಧ್ಯರಾತ್ರಿ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಶ್ವಾನದಳದ ನೆರವು ಪಡೆದಿದ್ದು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !