ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂದಿ ಆಯುವ ಮಹಿಳೆ ಹತ್ಯೆ ಪ್ರಕರಣ: ಮೂವರ ಬಂಧನ, ಮತ್ತೊಬ್ಬ ನಾಪತ್ತೆ

Last Updated 3 ಸೆಪ್ಟೆಂಬರ್ 2021, 13:13 IST
ಅಕ್ಷರ ಗಾತ್ರ

ಹಾಸನ: ಹೊಳೆನರಸೀಪುರ ಪಟ್ಟಣದ ಗಾಂಧಿ ವೃತ್ತದಸಮೀಪ ಆ.29ರ ರಾತ್ರಿ ನಡೆದಿದ್ದ ಚಿಂದಿಆಯುವ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರು ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ.

ಗಾಂಧಿ ನಗರದ ಕುತೇಜಾಬಾನು, ಸೈಯ್ಯದ್ ಸಾದಿಕ್ ಮತ್ತು ಮಹಮದ್ ರಫೀಕ್ ಬಂಧಿತರಾಗಿದ್ದು,ಮತ್ತೊಬ್ಬ ಆರೋಪಿ ದೊರೆಸ್ವಾಮಿ ಎಂಬಾತ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಬಲೆಬೀಸಲಾಗಿದೆ. ಬಂಧಿತರು ಚಿಂದಿ ಆಯುವ ಮೂಲಕ ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸ್‌ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ಗೌಡ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಆರೋಪಿಗಳ ಪತ್ತೆಗಾಗಿ ಸಿಪಿಐ ಬಿ.ಆರ್.ಪ್ರದೀಪ್, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಅರುಣ್, ವಿನಯ್‌ಕುಮಾರ್, ಅಶ್ವಿನಿ ನಾಯಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ಈ ತಂಡ ಮೂವರನ್ನು ಬಂಧಿಸಿದ್ದು, ತಂಡಕ್ಕೆ ಬಹುಮಾನ ನೀಡಲಾಗುವುದು. ಬಂಧಿತರಲ್ಲಿ ಸೈಯ್ಯದ್ ಸಾಧಿಕ್ ಈ ಹಿಂದೆ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಖುಲಾಸೆಯಾಗಿದ್ದ ಎಂದು ವಿವರಿಸಿದರು.

ಕೊಲೆಯಾದ ಹಳ್ಳಿ ಮೈಸೂರು ನಿವಾಸಿ ಮೀನಾಕ್ಷಿ ಚಿಂದಿ ಆಯುವುದಕ್ಕೆ ಮತ್ತು ರಟ್ಟಿನ ವ್ಯಾಪಾರಕ್ಕೆ ಅಡ್ಡಿಯಾಗಿದ್ದಳೆಂಬ ದ್ವೇಷ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಇದೇವಿಚಾರವಾಗಿ ವಾರದ ಹಿಂದೆ ಮೀನಾಕ್ಷಿ ಮತ್ತು ಆರೋಪಿಗಳ ನಡುವೆ ಜಗಳ ನಡೆದಿತ್ತು. ಅಂದು ರಾತ್ರಿಗಾಂಧಿ ವೃತ್ತ ನಂದಿನಿ ಹಾಲಿನ ಕ್ಷೀರ ಕೇಂದ್ರದ ಮುಂದೆ ಮಲಗಿದ್ದ ಮೀನಾಕ್ಷಿ ತಲೆಯ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿತ್ತು ಎಂದು ವಿವರಿಸಿದರು.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದರ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಈಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಮತ್ತೊಬ್ಬರಿಗೆ ಸಹಾಯ ಮಾಡುತ್ತಿದ್ದಳು ಎಂದರು.

ಗೋಷ್ಠಿಯಲ್ಲಿ ಎಎಸ್ಪಿ ಬಿ.ಎನ್.ನಂದಿನಿ, ಡಿವೈಎಸ್ಪಿ ಲಕ್ಷ್ಮೇಗೌಡ, ಸಿಪಿಐ ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT