ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರು ಡಯಾಲಿಸಿಸ್ ಯಂತ್ರ ಶೀಘ್ರ’

ಲಯನ್ಸ್‌ ಸಂಸ್ಥೆಯಿಂದ 10 ಐಸಿಯು ಹಾಸಿಗೆ ಕೊಡುಗೆ
Published 6 ಜುಲೈ 2023, 11:33 IST
Last Updated 6 ಜುಲೈ 2023, 11:33 IST
ಅಕ್ಷರ ಗಾತ್ರ

ಸಕಲೇಶಪುರ: ಲಯನ್ಸ್ ಸಂಸ್ಥೆಯಿಂದ ಇನ್ನೂ ಮೂರು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಲಯನ್ಸ್ ಸಂಸ್ಥೆಯ ಡಿಸ್ಟ್ರಿಕ್ಟ್ ಗವರ್ನರ್ ಸಂಜಿತ್ ಶೆಟ್ಟಿ ಹೇಳಿದರು.

ಲಯನ್ಸ್‌ ರಾಜ್ಯ‍ಪಾಲ ಸಂಜಿತ್ ಶೆಟ್ಟಿ ನೇತೃತ್ವದಲ್ಲಿ ಇಲ್ಲಿಯ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಗೆ ನೀಡಿರುವ 10 ಐಸಿಯು ಹಾಸಿಗೆ, ಲಯನ್ಸ್‌ ವಾರ್ಡ್‌ ಅನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಿ ಈ ವಿಷಯ ತಿಳಿಸಿದರು.

‘ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಗೆ ಬರುವ ಒಳ ರೋಗಿಗಳ ಅನುಕೂಲಕ್ಕಾಗಿ ಹಾಸಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಲಯನ್ಸ್‌ ಸಂಸ್ಥೆ ಹಾಗೂ ಹಾಸನ ಜಿಲ್ಲಾ ಬಂಟರ ಸಂಘ ಸಂಯಕ್ತಾಶ್ರಯದಲ್ಲಿ ಮೂರು ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಪಟ್ಟಣದ ಸೀನಪ್ಪಶೆಟ್ಟಿ ಕಲ್ಯಾಣ ಮಂಟಪ ಆವರಣದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ತಿಂಗಳಲ್ಲಿ ಉದ್ಘಾಟನೆಯಾಗಲಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ₹1800 ರಿಂದ ₹2000ಕ್ಕೂ ಹೆಚ್ಚು ಶುಲ್ಕ ಪಡೆಯುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ ಅಳವಡಿಸುವ ಕೇಂದ್ರದಲ್ಲಿ ₹950 ನಿಗದಿ ಮಾಡಿದ್ದೇವೆ. ಸಕಲೇಶಪುರ ತಾಲ್ಲೂಕಿನಲ್ಲಿ ಡಯಾಲಿಸಿಸ್‌‌‌‌ಗೆ ಭಾರೀ ಸಮಸ್ಯೆಯಾಗುತ್ತಿದ್ದು, ಹಾಸನ, ಮಂಗಳೂರು, ಬೆಂಗಳೂರು ಹೋಗಬೇಕಾಗಿದೆ’ ಎಂದರು.

ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಮಾತನಾಡಿ, ‘ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ಕಾರವನ್ನೆ ಅವಲಂಬಿಸುವ ಬದಲು ಲಯನ್ಸ್ ಮತ್ತು ರೋಟರಿ ಅಂತಹಾ ಸೇವಾ ಸಂಸ್ಧೆಗಳು ಸಮಾಜಕ್ಕೆ ಈ ರೀತಿ ನೆರವಾಗುವುದು ಶ್ಲಾಘನೀಯ. ಲಯನ್ಸ್‌ ಸಂಸ್ಥೆಯಿಂದ ನೀಡಿರುವ ಐಸಿಯು ಹಾಸಿಗೆಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದರು.

ಡಾ. ರತ್ನಾಕರ ಕಿಣಿ, ಡಾ. ಎಂ.ಆರ್. ಮಧುಸೂದನ್‌, ಡಾ. ನಿಶ್ಚಿತಾ, ಲಯನ್ಸ್ ಸಂಸ್ಥೆ ಅಧ್ಯಕ್ಷೆ ಬಬಿತಾ ವಿಶ್ವನಾಥ್, ಜಯಶಂಕರ್, ಕಾರ್ಯದರ್ಶಿ ವಿಶ್ವನಾಥ್, ವಲಯಾಧ್ಯಕ್ಷ ಸಿ.ಪಿ. ಪ್ರಸನ್ನ ಕುಮಾರ್, ಡಾ.ನವೀನ್ ಚಂದ್ರ ಶೆಟ್ಟಿ, ಡಾ. ಸುಧಾಕರ್, ರೋಟರಿ ಅಧ್ಯಕ್ಷ ಎಸ್‌.ಎಂ. ಸದಾಶಿವ, ಸಹನಾ ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT