ಟಿಪ್ಪು ಜಯಂತಿ ಅನಿವಾರ್ಯ: ಸಚಿವೆ ಜಯಮಾಲಾ

7

ಟಿಪ್ಪು ಜಯಂತಿ ಅನಿವಾರ್ಯ: ಸಚಿವೆ ಜಯಮಾಲಾ

Published:
Updated:

ಹಾಸನ: ‘ಟಿಪ್ಪು ಜಯಂತಿ ಮಾಡಬೇಕೆನ್ನುವುದು ಸರ್ಕಾರದ ನಿರ್ಧಾರ. ಹೀಗಾಗಿ ಆಚರಣೆ ಮಾಡುವುದು ಅನಿವಾರ್ಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದರು.

ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಟಿಪ್ಪು ಜಯಂತಿಗೆ ಬಿಜೆಪಿಯವರು ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಚರಿತ್ರೆಯಲ್ಲಿರುವ ವ್ಯಕ್ತಿಗಳ ಜಯಂತಿ ಆಚರಿಸುವಾಗ ವಿರೋಧ ಸಹಜ. ಟಿಪ್ಪು ಜಯಂತಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿರುವುದು ಏಕೆ ಎಂಬುದು ಗೊತ್ತಿಲ್ಲ. ಇತಿಹಾಸಕಾರರು ತಮಗೆ ತಿಳಿದಿದ್ದನ್ನು ದಾಖಲಿಸಿದ್ದಾರೆ. ನಿಜವಾದ ಚರಿತ್ರೆಯನ್ನು ಜನರಿಗೆ ತಿಳಿಸಬೇಕು. ಶಾಂತಿಯುತ ಆಚರಣೆಗೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದಿರುವ ಮೀ ಟೂ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯ ಬಂದಾಗ ಹೆಣ್ಣನ್ನು ಪದೇ ಪದೇ ಮುಜುಗರಕ್ಕೆ ಒಳಪಡಿಸುವ ಕೆಲಸ ಆಗುತ್ತಿದೆ. ಕೋರ್ಟ್‌ಗೆ ಬಂದು ಸಾಕ್ಷಿ ಹೇಳಬೇಕಾಗುತ್ತದೆ. ಸಾಕ್ಷಿಯನ್ನು ತಿರುಚಲಾಗುತ್ತದೆ. ಹೆಣ್ಣು ಮಾತ್ರವಲ್ಲದೇ ಗಂಡು ಸಹ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಹಾಗಾಗಿ ಅವರೇ ತೀರ್ಮಾನ ಮಾಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !