ಶನಿವಾರ, ಸೆಪ್ಟೆಂಬರ್ 21, 2019
21 °C
ಚಾರ್ಮಾಡಿ ಘಾಟ್‌ ಬಂದ್‌; ಕುಸಿದ ಬೆಲೆ, ಕಂಗೆಟ್ಟ ರೈತರು

ರಸ್ತೆ ಬದಿ ಟೊಮೆಟೊ ಸುರಿಯುತ್ತಿರುವ ರೈತರು

Published:
Updated:
Prajavani

ಹಳೇಬೀಡು: ಟೊಮೆಟೊ ಬೆಲೆ ಕುಸಿದಿರುವುದರಿಂದ ಕಂಗೆಟ್ಟಿರುವ ರೈತರು, ಟೊಮೆಟೊವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ.

ಬೇಲೂರು ರಸ್ತೆ, ಹಗರೆ ರಸ್ತೆ ಹಾಗೂ ದ್ವಾರಸಮುದ್ರ ಕೆರೆ ಏರಿಯ ಮೇಲೆ 10ಕ್ಕೂ ಹೆಚ್ಚಿನ ಕಡೆಗಳಲ್ಲಿ ಟೊಮೆಟೊವನ್ನು ಸುರಿಯಲಾಗಿದೆ.

ಈ ಭಾಗದಲ್ಲಿ ಬೆಳೆದ ಟೊಮೆಟೊವನ್ನು ಮಂಗಳೂರು ಭಾಗದ ವ್ಯಾಪಾರಿಗಳು ಹೆಚ್ಚಾಗಿ ಖರೀದಿ ಮಾಡುತ್ತಿದ್ದರು. ಆದರೆ, ಚಾರ್ಮಾಡಿ ಘಾಟ್‌ ಬಂದಾಗಿರುವುದರಿಂದ ಆ ಭಾಗದ ವ್ಯಾಪಾರಿಗಳು ಇತ್ತ ಸುಳಿಯುತ್ತಿಲ್ಲ. ಹಳೇಬೀಡು, ಬೇಲೂರು, ಹಾಸನದ ಮಾರುಕಟ್ಟೆಗಳಲ್ಲಿ 15 ಕೆ.ಜಿ. ತೂಕದ ಬಾಕ್ಸ್‌ ಕೇವಲ ₹30ಕ್ಕೆ ಮಾರಾಟವಾಗುತ್ತಿದೆ. ರೈತರಿಗೆ ಸಾಗಣೆ ವೆಚ್ಚವೂ ಸಿಗುತ್ತಿಲ್ಲ ಎಂದು ರೈತ ಎಚ್‌.ಸಿ.ಚೇತನ್‌ ಅಳಲು ತೋಡಿಕೊಂಡರು.

ಟೊಮೆಟೊ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಎಕರೆ ಟೊಮೆಟೊ ಬೆಳೆಯಲು ₹1 ಲಕ್ಷಕ್ಕೂ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಮಳೆ ಬಿದ್ದರೂ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಗೋಣಿಸೋಮೇನಹಳ್ಳಿ ಶಿವಕುಮಾರ್‌ ಹೇಳಿದರು.

ಹಳೇಬೀಡಿನ ಕೃಷಿ ಮಾರುಕಟ್ಟೆಯಲ್ಲಿ ಶೀತಲೀಕರಣ ಘಟಕ ಸ್ಥಾಪಿಸಬೇಕು ಎಂದು ರೈತ ಎಚ್‌.ಸಿ.ಪ್ರವೀಣ್‌ ಆಗ್ರಹಿಸಿದರು.

Post Comments (+)