ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು

Last Updated 19 ಸೆಪ್ಟೆಂಬರ್ 2020, 2:13 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ 14 ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆಯನ್ನು ಸಮರ್ಪಕವಾಗಿನಡೆಸುತ್ತಿಲ್ಲ ಎಂದು ಬಿಡ್ಡುದಾರರು ಕೆಲ ಸಮಯ ಮುಖ್ಯಾಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಪುರಸಭೆ ಆಡಳಿತಾಧಿಕಾರಿ ಹಾಗೂ ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಸಮದಾನ ಪಡಿಸಿ ಹರಾಜು ಪ್ರಕ್ರಿಯೆ ಪ್ರಾರಂಭಿಸಿದರು.

ಪುರಸಭೆ ಸಭಾಂಗಣದಲ್ಲಿ ನಡೆದ 14 ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ 12 ಮಳಿಗೆಗಳನ್ನು ಬಿಡ್ಡುದಾರರು ಹರಾಜು ಕೂಗಿದರೆ ಉಳಿದ ಎರಡು ಮಳಿಗೆಗಳಿಗೆ ಬಿಡ್ ಮಾಡಲು ಯಾರು ಮುಂದೆ ಬಾರದಿದ್ದರಿಂದ ಆ ಮಳಿಗೆಗಳ ಹರಾಜನ್ನು ಮುಂದೂಡಲಾಯಿತು. ಈ ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಬಹುತೇಕ ಮಳಿಗೆಗಳನ್ನು ಈಗಾಗಲೇ ಆ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವವರೇಮಳಿಗೆಗಳನ್ನು ಪೈಪೋಟಿಯಲ್ಲಿ ಹೆಚ್ಚಿನ ಬಿಡ್‍ಗೆ ಹರಾಜು ಕೂಗಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇ.ಎಂ.ಡಿ. ಠೇವಣಿ ಮೊತ್ತವನ್ನು ಸೇರಿ 2 ಲಕ್ಷ ರೂಪಾಯಿಯ ಡಿ.ಡಿ. ಸಲ್ಲಿಸಲಾಗಿತ್ತು, ಹರಾಜಿನಲ್ಲಿ ಭಾಗವಹಿಸುವವರು ಯಾವ ಮಳಿಗೆಗೆ ಹರಾಜಿನಲ್ಲಿ ಭಾಗವಹಿಸುತ್ತೇವೆ ಎಂದು ಅರ್ಜಿ ನೀಡಿದ್ದರು ಅದೇ ಮಳಿಗೆಯ ಬಿಡ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅವರು ಬೇರೆ ಮಳಿಗೆಯ ಬಿಡ್ ನಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ.

ಮಿಸಲಾತಿ ಆಧಾರಿಸಿ ಹರಾಜು; ಬಿಡ್ ಆದ 12 ಮಳಿಗೆಗಳ ಹರಾಜಿನಲ್ಲಿ ಪರಿಶಿಷ್ಟಜಾತಿಮತ್ತು ವರ್ಗಕ್ಕೆ 5 ಮಳಿಗೆಗಳು ಹಾಗೂ ಸಾಮಾನ್ಯ ವರ್ಗಕ್ಕೆ 9 ಮಳಿಗೆಗಳ ಮೀಸಲಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿವರ್ಗಕ್ಕೆ ಸೇರಿದ ಎರಡು ಮಳಿಗೆಗಳು ಬಿಡ್ ಹಾಗದೆ ಮುಂದೂಡಲ್ಪಟ್ಟವು. ಹರಾಜಿನಲ್ಲಿ ಪರಿಶಿಷ್ಟಜಾತಿ ಮತ್ತು ವರ್ಗಕ್ಕೆ ಮೀಸಲಾಗಿದ್ದ 1ನೇ ಮಳಿಗೆಯೂ 15 ಸಾವಿರ ರೂ, ಸಾಮಾನ್ಯಕ್ಕೆ ಮೀಸಲಾಗಿದ್ದ 2ನೇ ಮಳಿಗೆಯೂ 24,200 ರೂ. 3ನೇ ಮಳಿಗೆಯೂ 30,900ರೂ, 4ನೇ ಮಳಿಗೆಯೂ 29,800 ರೂ, 5ನೇ ಮಳಿಗೆಯೂ 30,200 ರೂ, 6ನೇ ಮಳಿಗೆ 30,200 ರೂ, 7ನೇ ಮಳಿಗೆಯೂ 31,200 ರೂ, 8ನೇ ಮಳಿಗೆ 25000 ರೂ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ 9ನೇ ಮಳಿಗೆ 22,800 ರೂ, ಸಾಮಾನ್ಯಕ್ಕೆ ಮೀಸಲಾದ 10ನೇ ಮಳಿಗೆ 26,200 ರೂ, ಪರಿಶಿಷ್ಟಜಾತಿ ಮತ್ತು ವರ್ಗಕ್ಕೆ ಮೀಸಲಾಗಿದ್ದ 11ನೇ ಮಳಿಗೆ 15,200 ರೂ, ಸಾಮಾನ್ಯಕ್ಕೆ ಮೀಸಲಿದ್ದ 14ನೇ ಮಳಿಗೆ 7,800 ರೂಗೆ ಹರಾಜಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT