ಉತ್ತಮ ಆಡಳಿತಕ್ಕೆ ಗೌಡರ ಸಲಹೆ ಅಗತ್ಯ

7
ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ

ಉತ್ತಮ ಆಡಳಿತಕ್ಕೆ ಗೌಡರ ಸಲಹೆ ಅಗತ್ಯ

Published:
Updated:
Deccan Herald

ಹಾಸನ : ‘ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂಬ ಕಾರಣಕ್ಕೆ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

‘ಪ್ರಸ್ತುತ ರಾಜ್ಯ ಸರ್ಕಾರದ ಸ್ಥಿತಿ ‘ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತಾಗಿದೆ. ಹಿಂದಿನ ಯಾವ ಸರ್ಕಾರದಲ್ಲೂ ಈ ಪ್ರಮಾಣದಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರಿಗಳ ವರ್ಗಾವಣೆ ದಂದೆ ನಡೆದಿರಲಿಲ್ಲ. ಕಂದಾಯ, ಗೃಹ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಅವ್ಯವಹಾರ ಮಿತಿ ಮೀರಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ನಡೆಯುವುದು ಉಭಯ ಪಕ್ಷದವರಿಗೆ ಬೇಕಾಗಿಲ್ಲ. ಕುಮಾರಸ್ವಾಮಿ ಎಚ್ಚೆತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಸುಭದ್ರ ಆಡಳಿತಕ್ಕಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಸಲಹೆ ಪಡೆದು ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪತ್ರಗಳಿಗೆ ಸರ್ಕಾರದಲ್ಲಿ ಗೌರವ ಇಲ್ಲ. ಎಲ್ಲ ಲಾಭ ಮಾಡಿಕೊಂಡು ಈಗ ಪತ್ರ ಬರೆದರೆ ಯಾವ ಪ್ರಯೋಜನ. ಭತ್ತದ ನಾಟಿ ಮಾಡಿದರೆ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ನಾಟಿ ಮಾಡುವ ಬಗ್ಗೆ ರೈತರಿಗೆ ಗೊತ್ತಿದೆ. ಮೀನಿಗೆ ಈಜು ಕಲಿಸುವುದು ಬೇಕಿಲ್ಲ. ಸಿ.ಎಂ ಆಗಿ ಮಾಡಬೇಕಿರುವ ಕೆಲಸ ಮಾಡಲಿ ಎಂದು ಟೀಕಿಸಿದರು.

‘ಆ. 15ಕ್ಕೆ ಸರ್ಕಾರ ರಚಿಸಿ ಮೂರು ತಿಂಗಳು ಕಳೆಯುತ್ತಿದ್ದು, ಯಾವುದೇ ಕೆಲಸ ಆಗಿಲ್ಲ. ಸಚಿವರು ಜಿಲ್ಲಾ ಪ್ರವಾಸ ಮಾಡುವಂತೆ ಸಚಿವರಿಗೆ ನಿರ್ದೇಶಿಸಬೇಕು. ಸರ್ಕಾರ ಬೀಳಿಸಬೇಕೆಂಬ ಉದ್ದೇಶ ನಮ್ಮದಲ್ಲ. ವಿರೋಧ ಪಕ್ಷವಾಗಿ ಸರ್ಕಾರ ಎಚ್ಚರಿಸುವ ಕೆಲಸ ಮಾಡುತ್ತೇವೆ. ಅದಕ್ಕೆ ಕೆಲಸ ಇಲ್ಲದವರು ಎನ್ನುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದೇಶಗಳಲ್ಲೂ ಹೆಸರು ಗಳಿಸಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವುದು ಖಚಿತ. ಕಾಂಗ್ರೆಸ್‌ ಮುಖಂಡ ಎ.ಮಂಜು ಬಿಜೆಪಿ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ಹಾಸನ ಕ್ಷೇತ್ರದಲ್ಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕರಾದ ಸಿ.ಟಿ.ರವಿ, ಪ್ರೀತಂ ಜೆ.ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್, ಮುಖಂಡರಾದ ನಾರಾಯಣಸ್ವಾಮಿ, ಬಿ.ಎಚ್.ವೇಣುಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !