ಮತ್ತೆ ರಸ್ತೆ, ವೃತ್ತಗಳಲ್ಲಿ ಶುರುವಾದ ಮಾರಾಟ: ಸಂಚಾರಕ್ಕೆ ಅಡಚಣೆ
ಎಚ್.ವಿ. ಸುರೇಶ್‌ಕುಮಾರ್
Published : 16 ಮಾರ್ಚ್ 2026, 2:54 IST
Last Updated : 16 ಮಾರ್ಚ್ 2026, 2:54 IST
ADVERTISEMENT
ಫಾಲೋ ಮಾಡಿ
Comments
ತರಕಾರಿ ಮಾರುಕಟ್ಟೆಯಲ್ಲಿ ₹6 ಸಾವಿರಕ್ಕೆ ಮಳಿಗೆ ಬಾಡಿಗೆ ಪಡೆದು ಅಂಗಡಿ ತೆರೆದಿದ್ದೇವೆ. ಎಲ್ಲರೂ ರಸ್ತೆ ಬದಿಯಲ್ಲೇ ಖರೀದಿಸುತ್ತಾರೆ. ನಮಗೆ ವ್ಯಾಪಾರ ಇಲ್ಲದೇ ತುಂಬಾ ಕಷ್ಟವಾಗಿದೆ
ಅಂಬಿಕಾ ತರಕಾರಿ ವ್ಯಾಪಾರಿ
ಇಲ್ಲಿ ಮಾರುಕಟ್ಟೆ ಪ್ರಾರಂಭವಾದಾಗ ಒಳ್ಳೆಯ ವ್ಯಾಪಾರ ಇತ್ತು. ಇತ್ತೀಚೆಗೆ ರಸ್ತೆ ಪ್ರಮುಖ ವೃತ್ತಗಳಲ್ಲಿ ತರಕಾರಿ ಹಣ್ಣು ಹಂಪಲು ಮಾರುವವರು ಹೆಚ್ಚಾಗಿದ್ದು ಜನರು ಮಾರುಕಟ್ಟೆಗೆ ಬರುತ್ತಿಲ್ಲ.
ವ್ಯಾಪಾರವೂ ಆಗುತ್ತಿಲ್ಲ ಅವ್ವಯಮ್ಮ ವ್ಯಾಪಾರಿ
ಮೊದಲು ತಾಲ್ಲೂಕು ಕಚೇರಿ ಸಮೀಪ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದೆ. ಶಾಸಕ ರೇವಣ್ಣ ಮಾರುಕಟ್ಟೆ ಕಟ್ಟಿಸಿ ನಮ್ಮನ್ನು ಇಲ್ಲಿಗೆ ಸ್ಥಳಾಂತರಿಸಿದ್ದರು. ಈಗ ಮತ್ತೆ ರಸ್ತೆಯಲ್ಲಿ ಮಾರಾಟ ಹೆಚ್ಚಾಗಿದ್ದು ನಮಗೆ ವ್ಯಾಪಾರ ಇಲ್ಲದಂತಾಗಿದೆ
ಎಚ್.ಜೆ. ಸುರೇಶ್ ಎಲೆ ವ್ಯಾಪಾರಿ
ರಸ್ತೆ ಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಅನೇಕರು ದೂರಿದ್ದಾರೆ. ಯುಗಾದಿ ನಂತರ ಪೊಲೀಸರ ಸಹಕಾರ ಪಡೆದು ಅವರನ್ನೆಲ್ಲ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು