ವೈಜ್ಞಾನಿಕ ಕೃಷಿ ಪದ್ಧತಿಯಿಂದ ಲಾಭ: ಚುಂಚಶ್ರೀ ಅಭಿಮತ

7
ಕೃಷಿ ವಸ್ತು ಪ್ರದರ್ಶನ

ವೈಜ್ಞಾನಿಕ ಕೃಷಿ ಪದ್ಧತಿಯಿಂದ ಲಾಭ: ಚುಂಚಶ್ರೀ ಅಭಿಮತ

Published:
Updated:
Deccan Herald

ಹಾಸನ: ಗ್ರಾಮಗಳು ಪ್ರಗತಿ ಸಾಧಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಆದಿಚುಂನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ‘ಕೃಷಿ ವಸ್ತು ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಶೇಕಡಾ 70 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರು ದೇಶದ ಬಹುದೊಡ್ಡ ಆಸ್ತಿ. ಆದ್ದರಿಂದ ದೇಶ ಅಭಿವೃದ್ಧಿ ಹೊಂದಬೇಕಾದರೆ ಗ್ರಾಮಗಳ ಅಭಿವೃದ್ಧಿಯಾಗಬೇಕು. ದಿನ ಕಳೆದಂತೆ ಕೃಷಿಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ. 2050ರ ವೇಳೆಗೆ ಭಾರತದಲ್ಲಿ ಶೇಕಡಾ 25ರಷ್ಟು ಮಂದಿಯಷ್ಟೇ ಕೃಷಿಯಲ್ಲಿ ಉಳಿಯಲಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಕೃಷಿ ರಂಗದಲ್ಲಿ ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿ ಸಾಧಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ವೈಜ್ಞಾನಿಕ ಕೃಷಿ ಪದ್ಧತಿಯಿಂದ ಉತ್ತಮ ಲಾಭ ಗಳಿಸಲು ಸಾಧ್ಯವಿದೆ ಎಂಬುದನ್ನು ಅರಿಯಬೇಕಿದೆ. ಪರಿಸರ ಉಳಿಸಲು ಎಲ್ಲರೂ ಗಮನ ಹರಿಸಬೇಕು. ಶೈಕ್ಷಣಿಕವಾಗಿ ಏನೇ ಪ್ರಗತಿ ಸಾಧಿಸಿದರೂ ಪರಿಸರದೊಂದಿಗಿನ ಸಂಬಂಧದಿಂದ ದೂರ ಉಳಿಯಬಾರದು ಎಂದು ಸಲಹೆ ನೀಡಿದರು.

ಕೃಷಿ ಕಾಲೇಜಿನ ಪ್ರಾಂಶುಪಾಲ ದೇವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವ ಮುನ್ನ ಕ್ಷೇತ್ರದ ಪರಿಣತರಿಂದ ತಿಳಿದುಕೊಳ್ಳುವುದು ಸೂಕ್ತ. ವಿದ್ಯಾರ್ಥಿಗಳಿಗೆ ಕೃಷಿ ಕಾರ್ಯಾನುಭವ ಶಿಬಿರಗಳು ಹೆಚ್ಚಿನ ನೆರವು ನೀಡಲಿದೆ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಎ.ಬಿ.ಪಾಟೀಲ್, ಅತ್ತಿಹಳ್ಳಿ ದೇವರಾಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಧಾ ಎಸ್.ದೇವೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ.ಸತೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಚುಂಚೇಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ವಕೀಲ ಶೇಷಾದ್ರಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !