ಕಾಡಾನೆ ದಾಳಿ, ಮಹಿಳೆ ಸಾವು

7

ಕಾಡಾನೆ ದಾಳಿ, ಮಹಿಳೆ ಸಾವು

Published:
Updated:

ಸಕಲೇಶಪುರ: ಕಾಡಾನೆ ದಾಳಿಗೆ ಸಿಕ್ಕು ಪಾದಚಾರಿ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಚಿನ್ನಹಳ್ಳಿ ಸಮೀಪದ ಹೊಸಗದ್ದೆ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮೃತಳನ್ನು ಸ್ಥಳೀಯ ನಿವಾಸಿ ತಾಯಮ್ಮ (58) ಎಂದು ಗುರುತಿಸಲಾಗಿದೆ.

‘ತೋಟಕ್ಕೆ ಬಂದಿದ್ದ ಕಾಡಾನೆ ಓಡಿಸಲು ಪಟಾಕಿ ಸಿಡಿಸಲಾಗಿದೆ. ಪಟಾಕಿ ಶಬ್ಧಕ್ಕೆ ಬೆದರಿದ ಪಕ್ಕದ ತೋಟಕ್ಕೆ ಹೋಗಲು ರಸ್ತೆ ದಾಟುವಾಗ ಅದರ ದಾಳಿಗೆ ಮಹಿಳೆ ಸಿಕ್ಕಿಬಿದ್ದಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿ ಮೋಹನ್‍ ಹೇಳಿದರು.

ದಿಢೀರ್‌ ಪ್ರತಿಭಟನೆ, 2 ಲಕ್ಷ ಪರಿಹಾರ: ಮಹಿಳೆ ಸಾವಿನ ಸುದ್ದಿ ತಿಳಿದಂತೆ ಆಕ್ರೋಶಗೊಂಡ ಗ್ರಾಮಸ್ಥರು ಕಾಡಾನೆ ಹಾವಳಿ ತಡೆಯಬೇಕು ಮತ್ತು ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಪಡಿಸಿ ದಿಢೀರ್‌ ಪ್ರತಿಭಟನೆ ನಡೆಸಿದರು.

ಕಾಡಾನೆಗಳ ದಾಳಿ ಹೆಚ್ಚಾಗುತ್ತಲೇ ಇದೆ. ಮನೆಯಿಂದ ಹೊರ ಬರಲೂ ಆತಂಕ ಪಡುವ ಸ್ಥಿತಿ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು  ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಉಪವಲಯ ಅರಣ್ಯ ಅಧಿಕಾರಿ ಶಿವರಾಂ ಬಾಬು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ದೂರು  ಆಲಿಸಿದರು. ಸ್ಥಳದಲ್ಲಿಯೇ ಮೃತ ತಾಯಮ್ಮ ಕುಟುಂಬಕ್ಕೆ ₹ 2 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು. ಕಾಡಾನೆ ಹಾವಳಿ ತಡೆಗೆ ಕ್ರಮವಹಿಸುವ ಭರವಸೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !