ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದ ಆರೋಗ್ಯ; ಕಾಳಜಿ ವಹಿಸಿ- ಡಿಎಚ್‌ಒ ಸತೀಶ್ ಸಲಹೆ

ನಿತ್ಯ ಯೋಗ, ವಾಕಿಂಗ್‌ ಮಾಡಲು
Last Updated 29 ಸೆಪ್ಟೆಂಬರ್ 2021, 15:27 IST
ಅಕ್ಷರ ಗಾತ್ರ

ಹಾಸನ: ‘ಮಾನವನಿಗೆ ಆರೋಗ್ಯವಂತ ಹೃದಯ ಅತ್ಯಂತ ಮುಖ್ಯ. ಹಾಗಾಗಿ ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಜೀವನ ನಡೆಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್ ಹೇಳಿದರು.

ವಿಶ್ವ ಹೃದಯ ದಿನದ ಅಂಗವಾಗಿ ಆಸರೆ ಫೌಂಡೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿನಿತ್ಯ ಯೋಗ, ವಾಕಿಂಗ್ ಮಾಡಬೇಕು. ಉತ್ತಮ ಆಹಾರ ಸೇವನೆಯೂ ಹೃದಯದ ಆರೋಗ್ಯವನ್ನು ಉತ್ತಮವಾಗಿಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

‘ಉಚಿತ ಹೃದಯ ತಪಾಸಣೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ವತಿಯಿಂದ ಉಚಿತ ಹೃದಯ ತಪಾಸಣಾ ಚಿಕಿತ್ಸೆ ನೀಡುತ್ತಿದ್ದು,ಹೃದಯ ಕಾಯಿಲೆ ಸಂಬಂಧಿಸಿದವರು ಸದುಪಯೋಗ ಪಡೆದು ಆರೋಗ್ಯವಂತರಾಗಿರಬೇಕು’ ಎಂದರು.

‘ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹೃದಯ ತಪಾಸಣಾ ಚಿಕಿತ್ಸೆ ದೊರೆಯಲಿದ್ದು, ನಿಯಮಿತವಾಗಿ ಹೃದಯ ತಪಾಸಣಾ ಮಾಡಿಸಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮಾತನಾಡಿ, ‘ಹೃದಯ ಬಡಿತ ಮನುಷ್ಯನ ಜೇವಂತಿಕೆಯಸಂಕೇತ. ಪ್ರತಿಯೊಬ್ಬರೂ ಆರೋಗ್ಯವಂತ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಸರೆ ಫೌಂಡೇಷನ್‌ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಇಂತಹ ಸೇವೆಗೆಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಅಬ್ದುಲ್ ಬಷೀರ್ ಮಾತನಾಡಿ, ‘ಹೃದಯ ಸಂಬಂಧಿ ಸಮಸ್ಯೆಗಳಿದ್ದರೆತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ಹೃದಯ ಕಾಯಿಲೆಗಳಿಗೆಸಲಹೆ, ಸೂಚನೆ ಪಡೆದುಕೊಳ್ಳಬೇಕು’ ಎಂದರು.

ಹೃದ್ರೋಗ ತಜ್ಞ ಡಾ.ಅನೂಪ್ ಮಾತನಾಡಿ, ‘ಪ್ರತಿನಿತ್ಯ ಹೃದಯದ ಆರೋಗ್ಯ ಕಾಪಾಡಲು ಸಮಯ ಮೀಸಲಿರಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲೂ ಹೆಚ್ಚಿನ ಹೃದಯ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತಿದ್ದು, ಅವರು ಕೆಲಸದ ಒತ್ತಡ ಕಡಿಮೆಗೊಳಿಸಿ ಹೃದಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಧೂಮಪಾನ, ಮದ್ಯಪಾನದಂತಹ ಕೆಟ್ಟ ಹವ್ಯಾಸಗಳನ್ನು ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ’ ಹೇಳಿದರು.

ಫೌಂಡೇಷನ್ ಅಧ್ಯಕ್ಷ ಗುರುಪ್ರಸಾದ್, ಗೌರವಾಧ್ಯಕ್ಷ ಬಿ.ಆರ್‌. ಉದಯ್ ಕುಮಾರ್, ಕಾರ್ಯದರ್ಶಿವಿನೋದ್ ಕುಮಾರ್, ಡಾ. ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT