ಶನಿವಾರ, ನವೆಂಬರ್ 16, 2019
21 °C

ಎತ್ತಿನಹೊಳೆ ಕಾಲುವೆಯಲ್ಲಿ ಬಿದ್ದು ಯುವಕ ಸಾವು

Published:
Updated:
Prajavani

ಅರಸೀಕೆರೆ: ಎತ್ತಿನಹೊಳೆ ನೀರಾವರಿ ಯೋಜನೆಯಡಿಯಲ್ಲಿ ಇನ್ನೂ ಪ್ರಗತಿಯಲ್ಲಿರುವ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮುದುಡಿ ಬಿ ತಾಂಡಾದಲ್ಲಿ ಶುಕ್ರವಾರ ನಡೆದಿದೆ.

ಮುದುಡಿ ಬಿ ತಾಂಡಾದ ಶಂಕರ ನಾಯ್ಕ ಅವರ ಪುತ್ರ ಮನೋಜ್ ನಾಯ್ಕ್ (20) ಮೃತಪಟ್ಟ ಯುವಕ.

ಹಾಸನದಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದ ಮನೋಜ್ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಬರೆದು ಮನೆಗೆ ಬಂದು ಮನೆಯಲ್ಲಿದ್ದ ಹಸುಗಳ ಮೈತೊಳೆಯಲೆಂದು ಹೋಗಿದ್ದ ಎತ್ತಿನಹೊಳೆ ಕಾಮಗಾರಿ ಕಾಲುವೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸುಮಾರು 20 ಅಡಿಯಷ್ಟು ನಿಂತಿರುವ ನೀರಿನಲ್ಲಿ ದಿಢೀರ್ ಕಾಲು ಜಾರಿ ಬಿದ್ದಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ 20 ಅಡಿ ಆಳದಲ್ಲಿ ಸಿಲುಕಿದ್ದ ಮನೋಜ್ ಮೃತದೇಹವನ್ನು ಮೇಲೆತ್ತಿದ್ದಾರೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)