ಸಹಕಾರಿ ಕ್ಷೇತ್ರ ಬೆಳೆದರೆ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ. ಒಂದು ವೇಳೆ ಕುಂಠಿತವಾದರೆ ರೈತರಿಗೇ ನಷ್ಟ. ರೈತರು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ
ಸಿ.ಎನ್. ಬಾಲಕೃಷ್ಣ ಶಾಸಕ
ಮನೆ ನೀಡಿದ ರಾಜ್ಯ ಸರ್ಕಾರ
‘ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅನುದಾನದ ಕೊರತೆಯಿಂದಾಗಿ ಒಂದೂ ಜನತಾ ಮನೆಯನ್ನು ಮಂಜೂರಾತಿ ಮಾಡಿಲ್ಲ’ ಎಂದು ಶಾಸಕ ಬಾಲಕೃಷ್ಣ ಹೇಳಿದರು. ‘ಪ್ರಗತಿ ಪಥದ ಯೋಜನೆಯಡಿ ಹಾಳಾಗಿರುವ ಜಿನ್ನೇನಹಳ್ಳಿ ದೇವರ ಹಳ್ಳಿಯ 2 ಕಿ.ಮೀ. ರಸ್ತೆಯನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸಲಾಗುವುದು. ಕಾಂತರಾಜಪುರ ಸಂಪರ್ಕಿಸುವ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿನ ಸಮುದಾಯ ಭವನಕ್ಕೆ ₹20 ಲಕ್ಷ ಒದಗಿಸುವುದಾಗಿ’ ಭರವಸೆ ನೀಡಿದರು.