ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಬಟಾಣಿ ತರಕಾರಿ ಬೆಲೆ ಇಳಿಮುಖ

ಕಿತ್ತಳೆ ಬೆಲೆ ₹ 10 ಇಳಿಕೆ; ಉಳಿದ ಹಣ್ಣುಗಳ ಬೆಲೆ ಯಥಾಸ್ಥಿತಿ
Last Updated 10 ಡಿಸೆಂಬರ್ 2018, 15:34 IST
ಅಕ್ಷರ ಗಾತ್ರ

ಹಾಸನ: ಹಸಿರುಬಟಾಣಿಗೆ ನಿತ್ಯ ಸಾಕಷ್ಟು ಬೇಡಿಕೆ ಇದೆ. ಪಾನಿಪುರಿ, ಮದುವೆ ಸಮಾರಂಭ, ಪಲ್ಯ ಹಾಗೂ ಇತ್ಯಾದಿ ಆಹಾರ ತಯಾರಿಸಲು ಹಸಿರು ಬಟಾಣಿ ಬಳಸಲಾಗುತ್ತಿದೆ. ಈ ವಾರ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವಕಾರಣ ಹಸಿರು ಬಟಾಣಿ ದರ ಕುಸಿದಿದೆ.

ಕಳೆದ ವಾರ ಒಂದು ಕೆ.ಜಿ.ಗೆ ₹ 60 ರಂತೆ ಮಾರಾಟವಾಗುತ್ತಿದ್ದ ಹಸಿರು ಬಟಾಣಿ ಈ ವಾರ ₹ 40 ರಂತೆ ಮಾರಾಟವಾಗುತ್ತಿದ್ದು, ಕೆ.ಜಿ.ಗೆ ₹ 20 ಕಡಿಮೆಯಾಗಿದೆ. ಹಾಸನ ಮಾರುಕಟ್ಟೆಗೆ ತಾಲ್ಲೂಕಿನ ಸಾಲಗಾಮೆ, ನಿಟ್ಟೂರು, ಹಳೇಬೀಡು, ಹೊಳೆನರಸೀಪುರ, ಆಲೂರು, ಹೊಳೆನರಸೀಪುರ ಹಾಸನ ಸುತ್ತಮುತ್ತಲ ಪ್ರದೇಶಗಳಿಂದ ಹಸಿರು ಬಟಾಣಿ ಮಾರುಕಟ್ಟೆಗೆ ಬರುತ್ತಿದೆ. ಸದ್ಯ ಸೀಸನ್‌ ಆರಂಭವಾಗಿರುವ ಕಾರಣ ಅಗತ್ಯಕ್ಕಿಂತ ಹೆಚ್ಚಿನ ಪ್ರಾಣದಲ್ಲಿ ಮಾರುಕಟ್ಟೆಗೆ ಅವಕವಾಗುತ್ತಿದೆ.

ಕಳೆದ ವಾರ ಕೊಂಚ ಚೇತರಿಕೆಯಾಗಿದ್ದ ಟೊಮೆಟೊ ಈ ವಾರ ಮತ್ತೆ ಕೆ.ಜಿ.ಗೆ ₹ 5 ಕುಸಿತವಾಗಿದೆ. ಕಳೆದ ವಾರ ಒಂದು ಕೆ.ಜಿ.ಗೆ ₹ 20 ರಂತೆ ಮಾರಾಟವಾಗುತ್ತಿತ್ತು. ಈ ವಾರ ₹ 15ರಂತೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರುಮತ್ತೆ ನಷ್ಟ ಅನುಭವಿಸುವಂತಾಗಿದೆ.

ವಾರದ ಹಿಂದೆ ಒಂದು ಕೆ.ಜಿ.ಗೆ ₹ 20 ರಂತೆ ಮಾರಾಟವಾಗುತ್ತಿದ್ದ ಈರುಳ್ಳಿ ದರವೂ ಈ ವಾರ ಕುಸಿತವಾಗಿದೆ. ಒಂದು ಕೆ.ಜಿ.ಗೆ ₹ 15 ರಂತೆ ಮಾರಾಟವಾಗುತ್ತಿದೆ. ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವಕಾರಣ ಬೆಲೆ ಕುಸಿತವಾಗಿದೆ.

ವಾರದ ಹಿಂದೆ ಒಂದು ಕೆ.ಜಿ ₹ 60ರಂತೆ ಮಾರಾಟವಾಗುತ್ತಿದ್ದ ಕಿತ್ತಳೆ ಈ ವಾರ ₹ 50 ರಂತೆ ಮಾರಾಟವಾಗುತ್ತಿದೆ. ಸದ್ಯ ಕಿತ್ತಳೆ ಸೀಸನ್‌ ಆರಂಭವಾಗಿದ್ದು, ಕೊಡಗು ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಕಿತ್ತಳೆ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ಬೆಲೆ ಇಳಿಕೆಯಾಗಿದೆ.

ವಾರದ ಹಿಂದೆ ₹ 70 ರಂತೆ ಮಾರಾಟವಾಗುತ್ತಿದ್ದ ದಾಳಿಂಬೆ ಈ ವಾರ ಒಂದು ಕೆ.ಜಿ.ಗೆ ₹ 80ರಂತೆ ಮಾರಾಟವಾಗುತ್ತಿದ್ದು, ₹ 10 ಏರಿಕೆಯಾಗಿದೆ. ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮೂಸಂಬಿಮಾರುಕಟ್ಟೆಗೆ ಬರುತ್ತಿರುವ ಕಾರಣ ಬೆಲೆ ಕೊಂಚ ಏರಿಕೆಯಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಪ್ರಕಾಶ್‌.

ಸೇಬು ಹಣ್ಣಿನ ದರ ಕಳೆದ ಐದಾರು ವಾರಗಳಿಂದ ಅಷ್ಟೇ ಇದ್ದು, ಕೆ.ಜಿ.ಗೆ ₹ 100ರಂತೆ ಮಾರಾಟವಾಗುತ್ತಿದೆ. ಸಪೋಟಾ ಒಂದು ಕೆ.ಜಿ.ಗೆ ₹ 60, ಬಾಳೆಹಣ್ಣು ಕೆ.ಜಿ.ಗೆ ₹ 60, ಸೀತಾಫಲ ಕೆ.ಜಿ.ಗೆ ₹ 80, ಪಪ್ಪಾಯಿಕೆ.ಜಿ.ಗೆ ₹ 25 ರಂತೆ ಮಾರಾಟವಾಗುತ್ತಿತ್ತು. ದ್ರಾಕ್ಷಿ ಕೆ.ಜಿ.ಗೆ 160, ಕಲ್ಲಂಗಡಿ ಹಣ್ಣು ಕೆ.ಜಿ.ಗೆ ₹ 20ರಂತೆ ಮಾರಾಟವಾಗುತ್ತಿತ್ತು.

ಉಳಿದಂತೆ ಬೀನ್ಸ್‌ ಒಂದು ಕೆ.ಜಿ.ಗೆ ₹ 30, ಹಿರೇಕಾಯಿ ಕೆ.ಜಿ.ಗೆ ₹ 40, ಬೆಂಡೇಕಾಯಿ ಒಂದು ಕೆ.ಜಿ. ಗೆ ₹ 30, ಮೆಣಸಿನಕಾಯಿ ಒಂದು ಕೆ.ಜಿಗೆ ₹ 30, ಆಲೂಗೆಡ್ಡೆ ₹ 20, ಕೊತ್ತಂಬರಿ ಒಂದು ಕಂತೆಗೆ ₹ 3, ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪನ್ನು ಒಂದು ಕಂತೆಗೆ ₹ 3 ರಿಂದ ₹ 5 ರಂತೆ ಮಾರಾಟ ಮಾಡಲಾಗುತ್ತಿತ್ತು.

ಹಣ್ಣುಗಳ ದರ (₹ ಕೆ.ಜಿ.ಗೆ)
ಸೇಬು;100

ದಾಳಿಂಬೆ;80

ಕಿತ್ತಳೆ;50

ಮೂಸಂಬಿ;₹ 80

ಬಾಳೆಹಣ್ಣು;₹ 60

ತರಕಾರಿ ದರ (₹ ಕೆ.ಜಿ.ಗೆ)

ಟೊಮೆಟೊ; 15

ಈರುಳ್ಳಿ; 15

ಮೆಣಸಿನಕಾಯಿ; 30

ಆಲೂಗೆಡ್ಡೆ;20

ನುಗ್ಗೆಕಾಯಿ; 80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT