ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿಗೆ ₹350 ಕೋಟಿ ನಷ್ಟ: ಡಿ.ಸಿ

ಹಾಸನ, ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕು ಮಳೆ ಪೀಡಿತ
Last Updated 21 ಸೆಪ್ಟೆಂಬರ್ 2020, 13:18 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾದಾದ್ಯಂತ ಕಳೆದ ಕಳೆದ ಆಗಸ್ಟ್ ನಿಂದ ಸುರಿದ ಭಾರಿ ಮಳೆಗೆ ಬೆಳೆ, ವಿದ್ಯುತ್ ಕಂಬ, ರಸ್ತೆ,ಮನೆ ಸೇರಿದಂತೆ ₹350 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಕಲೇಶಪುರ ತಾಲ್ಲೂಕಿನಲ್ಲಿ ಶೇಕಡಾ 400 ರಷ್ಟು ಮಳೆಯಾಗಿತ್ತು. 1141ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲಾಗಿದೆ. ಹಾನಿಗೀಡಾಗಿರುವ 348 ಮನೆಗಳ ಪೈಕಿ 119 ಪೂರ್ಣ ಹಾನಿಯಾಗಿವೆ. ಶೇಕಡಾ 25 ರಿಂದ 75 ರಷ್ಟು 39 ಮನೆ ಹಾಳಾಗಿವೆ. 190 ಮನೆ ಭಾಗಶಃ ಹಾನಿಯಾಗಿದೆ. ಡಾಡಾ ಎಂಟ್ರಿ ಕಾರ್ಯ ಮುಗಿದ ನಂತರ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಗೆ ಕಳಿಸಲಾಗುವುದು. ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ ಎಂದು ವಿವರಿಸಿದರು.

ಶೇಕಡಾ 75 ಕ್ಕಿಂತ ಹೆಚ್ಚಿನ ಹಾನಿಯಾಗಿದ್ದರೆ ವಿಶೇಷ ಪ್ಯಾಕೇಜ್‌ ಅಡಿ ₹ 5 ಲಕ್ಷ ಪರಿಹಾರ ಸಿಗಲಿದೆ. ಶೇಕಡಾ 25 ರಿಂದ 75 ರ ವರೆಗೆ ಹಾನಿಯಾಗಿ ಪುನರ್ ನಿರ್ಮಾಣ ಮಾಡಿದರೆ ₹ 5 ಲಕ್ಷ, ರಿಪೇರಿ ಮಾಡಿಕೊಂಡರೆ ₹ 3 ಲಕ್ಷ ಸಿಗಲಿದೆ. ಶೇಕಡಾ 25 ರಿಂದ ಕಡಿಮೆ ಶೇಕಡಾ15 ಕ್ಕಿಂತ ಹೆಚ್ಚಿದ್ದರೆ ‘ ಸಿ’ ಕೆಟಗರಿಯಲ್ಲಿ ₹50 ಸಾವಿರ ಪರಿಹಾರ ಸಿಗಲಿದೆ ಎಂದರು.‌

ಜಿಲ್ಲೆಯ ಐದು ತಾಲೂಕುಗಳನ್ನು ಮಳೆ ಪೀಡಿತ ತಾಲ್ಲೂಕು ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಹಾಸನ, ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕುಗಳಿಗೆ ಮಾತ್ರ ರಾಜ್ಯಗಳ ಅಪಾಯ ನಿರ್ವಹಣಾ ನಿಧಿ ( ಎಸ್ ಡಿ ಆರ್ ಫ್) ಅಡಿಯಲ್ಲಿ ಬರುವ ಪರಿಹಾರ ಸಿಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಸೇರಿ 4,440 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಇದರಲ್ಲಿ 1 ಸಾವಿರ ಹೆಕ್ಟೇರ್ ಭತ್ತ, ಉಳಿದ 3440 ಹೆಕ್ಟೇರ್ ಮೆಕ್ಕೆ ಜೋಳ ನಷ್ಟವಾಗಿದೆ. ಇದಲ್ಲದೆ 7924 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಹಾಗೂ ಮೆಣಸು ಬೆಳೆ ನಾಶವಾಗಿದೆ. ಮರ ಬಿದ್ದು ಕಾಫಿ ಬೆಳೆ ನಷ್ಟವಾಗಿದೆ. ಬೆಳೆ ಹಾನಿ ಸಂಬಂಧ ಜಂಟಿ ಸಮೀಕ್ಷೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪರಿಹಾರ ಸಾಫ್ಟ್ ವೇರ್ ನಲ್ಲಿ ನಷ್ಟವಾಗಿರುವ ರೈತರ ಮಾಹಿತಿ ಅಪ್ ಲೋಡ್ ಮಾಡಲಾಗುತ್ತಿದೆ. ಡಾಟಾ ಎಂಟ್ರಿ ಆರಂಭಿಸಿ ಎಂದು ಸೂಚನೆ ಬಂದಿರುವುದರಿಂದ ಶೀಘ್ರ ಮುಗಿಸಲಾಗುವುದು. ಗ್ರಾಮ ಪಂಚಾಯಿತಿ ಇಲಾಖೆ ವ್ಯಾಪ್ತಿಯಲ್ಲಿ ಗ್ರಾಮಾಂತರ ರಸ್ತೆಗಳು 756 ಕಿಮೀ, 98 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 344 ಶಾಲಾ ಕಟ್ಟಡ, ಸರ್ಕಾರಿ ಕಟ್ಟಡ ಸಮುದಾಯ ಭವನ 366 ಹಾನಿಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಕುಡಿಯುವ ನೀರಿನ ಘಟಕಗಳಿಗೂ ಹಾನಿಯಾಗಿದೆ ಎಂದು ನುಡಿದರು.

ಲೋಕೋಪಯೋಗಿ ಇಲಾಖೆಯಡಿ, 65 ಕಿಮೀ ರಾಜ್ಯ ಹೆದ್ದಾರಿ ಹಾನಿಯಾಗಿದೆ. 96 ಕಿಮೀ ಜಿಲ್ಲಾ ರಸ್ತೆಯಾಗಿದೆ. ಇದನ್ನು ಎನ್ ಡಿ ಆರ್ ಎಫ್ ಅಡಿಯಲ್ಲಿ ಕಡಿಮೆ ಅನುದಾನ ಕೆಲಸ ಮಾಡಲು ಆಗುವುದಿಲ್ಲ. ಪ್ರತ್ಯೇಕ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತುರ್ತು ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ₹ 5 ಕೋಟಿ ಹಣ ಇದೆ. ಮುಂದಿನ ವಾರದಿಂದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆರಂಭವಾಗಲಿದೆ ಎಂದರು.

ಮನೆ ಬೆಳೆ ನಷ್ಟಕ್ಕೆ, ಪುನರ್ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿಲ್ಲ. ಅನುದಾನ ಬಂದ ನಂತರ ಕೆಲಸ ಆರಂಭಿಸಲಾಗುವುದು. ಈ ಸಂಬಂಧ ಈಗಾಗಲೇ ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT