ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ದೇವಾಲಯ:₹3 ಕೋಟಿ ಆದಾಯ ಸಂಗ್ರಹ

ಹಾಸನಾಂಬೆ ಹುಂಡಿ ಹಣ ಎಣಿಕೆ: ಈ ವರ್ಷ ₹ 60 ಲಕ್ಷ ಹೆಚ್ಚಳ
Last Updated 30 ಅಕ್ಟೋಬರ್ 2019, 14:04 IST
ಅಕ್ಷರ ಗಾತ್ರ

‌ಹಾಸನ: ಹಾಸನಾಂಬ ದೇವಾಲಯದಲ್ಲಿ ಈ ಬಾರಿ ₹ 3,06,41,011 ಆದಾಯ ಸಂಗ್ರಹವಾಗಿದೆ.

ಬುಧವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಹುಂಡಿ ಎಣಿಕೆ ಕಾರ್ಯ ಸಂಜೆ 5ಗಂಟೆಗೆ ಪೂರ್ಣಗೊಂಡಿತು. ಕಳೆದ ವರ್ಷ ಒಟ್ಟು ₹2,48,28771 ಸಂಗ್ರಹವಾಗಿತ್ತು.

ಈ ವರ್ಷ ಹಾಸನಾಂಬೆ ಹುಂಡಿಯಲ್ಲಿ ₹1,31,24, 424, ಸಿದ್ದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ₹ 12,18,329 ಮತ್ತು ‌ನೇರ ಹಾಗೂ ವಿಶೇಷ ದರ್ಶನದ ₹ 300 ಹಾಗೂ ₹ 1000 ಬೆಲೆಯ ಟಿಕೆಟ್‌ ಹಾಗೂ ಲಾಡು ಮಾರಾಟದಿಂದ ₹ 1,75,16,587 ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದರ್ಶನದ ಅವಧಿ ಹೆಚ್ಚು ಇದ್ದ ಕಾರಣ ಆದಾಯ ಹೆಚ್ಚಾಗಲೂ ಕಾರಣ ಎಂದು ಹೇಳಲಾಗಿದೆ. ಅ.17ರಿಂದ ಜಾತ್ರಾ ಮಹೋತ್ಸವ ಆರಂಭಗೊಂಡು 29ರಂದು ಮುಕ್ತಾಯಗೊಂಡಿತು.

ದೇವಾಲಯದ 17 ಹುಂಡಿಗಳನ್ನು ಬೆಳಗ್ಗೆ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ತೆರೆದು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಆರಂಭಿಸಲಾಯಿತು. ವಿಶೇಷ ದರ್ಶನದ ಟಿಕೆಟ್‌ ಮತ್ತು ಲಾಡು ಮಾರಾಟದಿಂದ ₹ 1,75,16,587 ಸಂದಾಯವಾಗಿದೆ.

ಬ್ಯಾಂಕ್‌ ಸಿಬ್ಬಂದಿ 25, ಕಂದಾಯ ಇಲಾಖೆ 100 ಹಾಗೂ ಸ್ಕೌಟ್‌, ಗೈಡ್ಸ್‌ ಮಕ್ಕಳು, ದೇವಾಲಯದ ಆಡಳಿತಾಧಿಕಾರಿ ಎಚ್‌.ಎಲ್‌.ನಾಗರಾಜ್‌, ತಹಶೀಲ್ದಾರ್‌ ಮೇಘನಾ, ಉಪವಿಭಾಗಾಧಿಕಾರಿ ನವೀನ್‌ ಭಟ್‌ ಸೇರಿ 200 ಮಂದಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

ಹುಂಡಿ ಎಣಿಕೆ ವೇಳೆ ಪ್ರೇಮ ಪತ್ರ, ಕೌಟುಂಬಿಕ ಸಮಸ್ಯೆ ನಿವಾರಿಸುವಂತೆ ಪ್ರಾರ್ಥನೆಯ ಪತ್ರದೊಮದಿಗೆ ನಿಷೇಧವಾಗಿರುವ ನೋಟುಗಳು ಸಹ ಸಿಕ್ಕಿವೆ. ಇಸ್ರೇಲ್‌, ಶ್ರೀಲಂಕಾ ಕರೆನ್ಸಿ ಹಾಗೂ ಸಿಂಗಾಪುರ ನಾಣ್ಯಗಳು ದೊರೆತಿವೆ.

ಹಾಸನಾಂಬೆ ಹುಂಡಿಯಿಂದ ಸಂಗ್ರಹವಾದ ಕೆನರಾ ಬ್ಯಾಂಕ್‌ ಮತ್ತು ಸಿದ್ದೇಶ್ವರ ಸ್ವಾಮಿ ದೇವಾಲಯದ ಹುಂಡಿ ಹಣವನ್ನು ಐಡಿಬಿಐ ಬ್ಯಾಂಕ್‌ಗೆ ಜಮಾ ಮಾಡಲಾಯಿತು.

2017ರಲ್ಲಿ ದೇವಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ₹ 4,14,64,967 ಆದಾಯ ಬಂದಿತ್ತು. ಹಾಸನಾಂಬ ಹುಂಡಿಯಿಂದ ₹ 1,10,91,383, ಸಿದ್ದೇಶ್ವರ ದೇವಾಲಯ ಹುಂಡಿಯಿಂದ ₹ 7,68,090 ಹಾಗೂ ಟಿಕೆಟ್‌, ಲಾಡು ಪ್ರಸಾದ ಮಾರಾಟದಿಂದ ₹ 2,96,04,494 ಕೋಟಿ ಸಂಗ್ರಹವಾಗಿತ್ತು.

‘ಹುಂಡಿ ಎಣಿಕೆ ಮಾಡುವಾಗ ಚಿನ್ನ, ಬೆಳ್ಳಿ ಸಾಮಗ್ರಿಗಳು, ಇಸ್ರೇಲ್‌, ಶ್ರೀಲಂಕಾ ಕರೆನ್ಸಿ, ಸಿಂಗಾಪುರ ನಾಣ್ಯಗಳು ಸಿಕ್ಕಿವೆ. ಉದ್ಯೋಗ ಕೊಡಿಸುವಂತೆ, ರಿಯಲ್‌ ಎಸ್ಟೇಟ್‌ ಉದ್ಯಮಿ ಕಬಳಿಸಿರುವ ನಿವೇಶನ ವಾಪಸ್‌ ಕೊಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಭಕ್ತರು ದೇವಿಗೆ ಬರೆದಿರುವ 150 ಪತ್ರಗಳು ದೊರೆತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಈ ರ್ಷ ₹ 60 ಲಕ್ಷ ಹೆಚ್ಚಾಗಿದೆ. ಜಾತ್ರಾ ಮಹೋತ್ಸವ ಯಶಸ್ವಿ ಮುಕ್ತಾಯಗೊಂಡಿದೆ’ ಎಂದು ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT