ಸೋಮವಾರ, ಆಗಸ್ಟ್ 10, 2020
22 °C
150 ಚೀಲ ಯೂರಿಯಾ ಅಕ್ರಮ ಸಾಗಣೆ ಆರೋಪ

ಪೊಲೀಸರಿಗೆ ಟ್ರಾಕ್ಟರ್‌ ಒಪ್ಪಿಸಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ:‌ ನಗರದ ಎಪಿಎಂಸಿ ಗೋದಾಮಿನಿಂದ ಸವಣೂರಿಗೆ ಗುರುವಾರ ತಡರಾತ್ರಿ ಅಕ್ರಮವಾಗಿ ಟ್ರಾಕ್ಟರ್‌ನಲ್ಲಿ ಸಾಗಣೆ ಮಾಡುತ್ತಿದ್ದರು ಎನ್ನಲಾದ 150 ಯೂರಿಯಾ ರಸಗೊಬ್ಬರ ಚೀಲಗಳನ್ನು ತಡೆದ ರೈತರು, ವಾಹನ ಸಮೇತ ನಗರ ಪೊಲೀಸ್‌ ಠಾಣೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. 

ಶುಕ್ರವಾರ ರಸಗೊಬ್ಬರ ಖರೀದಿಸಲು ನಗರಕ್ಕೆ ಬಂದಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡರು ಇಲ್ಲಿನ ಎಪಿಎಂಸಿ ಗೋದಾಮುಗಳಿಗೆ ಭೇಟಿ ನೀಡಿ ರಸಗೊಬ್ಬರದ ದಾಸ್ತಾನು ಪರಿಶೀಲಿಸಲು ಮುಂದಾದರು. ಸ್ಥಳಕ್ಕೆ ಬಂದ ಮಾರ್ಕೆಟಿಂಗ್ ಫೆಡರೇಷನ್‌ ಅಧಿಕಾರಿಗಳನ್ನು ರೈತರು ತರಾಟೆಗೆ ತಗೆದುಕೊಂಡರು. ತಡರಾತ್ರಿ ಗೊಬ್ಬರ ಸಾಗಣೆ ಮಾಡಲು ಅನುಮತಿ ನೀಡಿದವರು ಯಾರು? ಗೋದಾಮಿನಲ್ಲಿ ದಾಸ್ತಾನು ಇರುವ ಯೂರಿಯಾ ಬಗ್ಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು. 

ಗೋದಾಮಿನ ಚಾವಿ ತೆಗೆಯಲು ಅಧಿಕಾರಿಗಳು ಹಿಂದೇಟು ಹಾಕಿದಾಗ, ಎಪಿಎಂಸಿ ಅಧ್ಯಕ್ಷರ ಸಮ್ಮುಖದಲ್ಲೇ ರೈತ ಮುಖಂಡರು ಗೋದಾಮಿನ ಬೀಗ ಒಡೆದರು. ನೂರಾರು ಚೀಲ ಯೂರಿಯಾ ದಾಸ್ತಾನು ಮಾಡಿದ್ದು ಕಂಡು ಬಂದಿತು. ಈ ಯೂರಿಯಾ ಯಾರಿಗೆ ಸೇರಿದ್ದು ಎಂಬ ಬಗ್ಗೆ ಫೆಡರೇಷನ್‌ ಮತ್ತು ಕೃಷಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಸೂಕ್ತ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.