ಬರವಣಿಗೆ ಕಲೆ ರೂಢಿಸಿಕೊಳ್ಳಿ: ಕುಮ್ಮೂರ

7

ಬರವಣಿಗೆ ಕಲೆ ರೂಢಿಸಿಕೊಳ್ಳಿ: ಕುಮ್ಮೂರ

Published:
Updated:
Prajavani

ಹಾವೇರಿ: ಸೀಮಿತ ಸಮಯದಲ್ಲಿ ವಾದ ಮಂಡನೆ ಹಾಗೂ ಬರವಣಿಗೆ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಪ್ಪ ಕುಮ್ಮೂರ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ– 3ರಲ್ಲಿ ಶುಕ್ರವಾರ ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಹಮ್ಮಿಕೊಂಡ  ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಮಾತುಗಾರಿಕೆ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ದೊರಕಿದ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು

ಪ್ರಬಂಧ ಸ್ಪರ್ಧೆಯಲ್ಲಿ ಚಂದ್ರಿಕಾ ಶೇಖಪ್ಪ ಗಾಜೇರ (ಪ್ರಥಮ), ಪೂರ್ಣಿಮಾ ಪೂಜಾರ (ದ್ವಿತೀಯ), ಶಿಲ್ಪಾ ಸಿದ್ದಪ್ಪ ಹೊಸಳ್ಳಿ (ತೃತೀಯ) ಹಾಗೂ ಚರ್ಚಾ ಸ್ಪರ್ಧೆಯ ವಿಷಯದ ಪರವಾಗಿ ಸಂಗೀತಾ ಹಿರೇಮಠ (ಪ್ರಥಮ), ಸೋಮಶೇಖರ ಸಂಗೂರ (ದ್ವಿತೀಯ) ವಿಷಯದ ವಿರೋಧವಾಗಿ ಕಾವ್ಯಾ ಹಿರೇಮಠ (ಪ್ರಥಮ), ಸುವರ್ಣ ಕಮ್ಮಾರ ಪ್ರಶಸ್ತಿ ಪಡೆದಿದ್ದಾರೆ.

ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಜಿ. ಸುಣಗಾರ, ಶಿಕ್ಷಕಿ ಎಚ್.ಎಸ್.ಹಿರೇಮಠ, ಎ.ಎಸ್.ಪಾಟೀಲ, ಎಂ.ಎಸ್.ಜಂಗರಡ್ಡೇರ, ಅಕ್ಷಯಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !