ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಪದವೀಧರರ ಕ್ಷೇತ್ರ: ಹಾವೇರಿ ಜಿಲ್ಲೆಯಲ್ಲಿ ಶೇ 68ರಷ್ಟು ಮತದಾನ

ಜಿಲ್ಲೆಯ 37 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ: 16,023 ಪದವೀಧರರಿಂದ ಮತ ಚಲಾವಣೆ
Last Updated 28 ಅಕ್ಟೋಬರ್ 2020, 16:14 IST
ಅಕ್ಷರ ಗಾತ್ರ

ಹಾವೇರಿ:ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 67.90ರಷ್ಟು ಮತದಾನವಾಗಿದೆ. ಜಿಲ್ಲೆಯ 37 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವಾಗಿದೆ. ಜಿಲ್ಲೆಯ 11,698 ಪುರುಷರು ಹಾಗೂ 4,325 ಮಹಿಳೆಯರು ಒಳಗೊಂಡಂತೆ ಒಟ್ಟು 16,023 ಪದವೀಧರರು ಮತ ಚಲಾಯಿಸಿದ್ದಾರೆ.

ಹಾವೇರಿ, ಗದಗ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಒಳಗೊಂಡಿರುವ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಒಟ್ಟಾರೆ 74,278 ಮತದಾರರಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 16,216 ಪುರುಷರು 7378 ಮಹಿಳೆಯರು ಹಾಗೂ 5 ಜನ ಇತರ ಮತದಾರರು ಸೇರಿದಂತೆ ಒಟ್ಟು 23,599 ಪದವೀಧರರ ಮತದಾರರು ಒಳಗೊಂಡಿದ್ದರು.

ತಾಲ್ಲೂಕುವಾರು ವಿವರ:

ಬ್ಯಾಡಗಿ (ಶೇ 75.85), ಹಾನಗಲ್‌ (ಶೇ 70.09), ಹಾವೇರಿ (ಶೇ 70.70), ಹಿರೇಕೆರೂರು (ಶೇ 70.75), ಸವಣೂರು (ಶೇ 81.74), ಶಿಗ್ಗಾವಿ (ಶೇ 67.46) ಹಾಗೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ (ಶೇ 60.61) ಮತದಾನವಾಗಿದೆ. ಸವಣೂರಿನಲ್ಲಿ ಅತಿಹೆಚ್ಚು ಮತದಾನ ಹಾಗೂ ರಾಣೆಬೆನ್ನೂರಿನಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಕೋವಿಡ್‌ ಮಾರ್ಗಸೂಚಿ:

ಕೋವಿಡ್ ಸಂದರ್ಭದಲ್ಲಿ ನಡೆಯುತ್ತಿರುವ ಚುನಾವಣೆಗೆ ಪ್ರಾಮಾಣಿಕ ಮಾರ್ಗಸೂಚಿಯ ಅನುಪಾಲನೆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ 37 ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಹೆಲ್ತ್‌ಡೆಸ್ಕ್‌ ಸ್ಥಾಪಿಸಿತ್ತು. ಮತದಾರರ ಆರೋಗ್ಯ ತಪಾಸಣೆ, ಸ್ಯಾನಿಟೈಸರ್ ಹಾಗೂ ಅಗತ್ಯವಿದ್ದವರಿಗೆ ಮಾಸ್ಕ್ ವಿತರಣೆಗೆ ಆರೋಗ್ಯ ಸಿಬ್ಬಂದಿ ನಿಯೋಜಿಸಿ ಕ್ರಮವಹಿಸಿತ್ತು.

ಬೆಳಿಗ್ಗೆ 10ರವರೆಗೆ ಮಂದಗತಿಯಲ್ಲಿ ಆರಂಭಗೊಂಡ ಮತದಾನ ಬೆಳಿಗ್ಗೆ 11 ಗಂಟೆಯ ನಂತರ ಸ್ವಲ್ಪ ಚುರುಕುಗೊಂಡಿತು. ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಮಾಸ್ಕ್‌ ಹಾಕಿಕೊಂಡು ಸರತಿಯಲ್ಲಿ ನಿಂತು ಮತದಾರರು ಮತದಾನದ ಮಾಡಿದ ದೃಶ್ಯ ಕಂಡು ಬಂದಿತು. ಹಾವೇರಿ ನಗರ, ಮೋಟೆಬೆನ್ನೂರ, ಬ್ಯಾಡಗಿ ಒಳಗೊಂಡಂತೆ ಹಲವು ಮತಗಟ್ಟೆಯಲ್ಲಿ ಚುರುಕಿನ ಮತದಾನ ನಡೆಯಿತು.

ಮತ ಚಲಾಯಿಸದ ಸೋಂಕಿತರು:

ಪ್ರತಿ ಮತಗಟ್ಟೆ ಹೊರ ಆವರಣದಲ್ಲಿ ಅಂತರ ಕಾಯ್ದುಕೊಳ್ಳಲು ಮಾರ್ಕ್‌ ಮಾಡಲಾಗಿತ್ತು. ಕೋವಿಡ್ ಸೋಂಕು ಹೊಂದಿದ ಮತದಾರರಿಗೆ ಸಂಜೆ 4ರ ನಂತರ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಂಕಿತ ಮತದಾರರಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಪಿ.ಪಿ.ಇ ಕಿಟ್ ವ್ಯವಸ್ಥೆ ಮಾಡಲಾಗಿತ್ತು. ಸೋಂಕಿತರ ಪೈಕಿ ರಾಣೆಬೆನ್ನೂರ ತಾಲೂಕಿನಲ್ಲಿ 4 ಮಂದಿ, ಹಾವೇರಿ ತಾಲ್ಲೂಕು ಹಾಗೂ ಹಾನಗಲ್ ತಾಲ್ಲೂಕಿನಲ್ಲಿ ತಲಾ ಇಬ್ಬರಂತೆ 9 ಪದವೀಧರ ಮತದಾರರಿದ್ದು ಯಾರೊಬ್ಬರೂ ಮತ ಚಲಾಯಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT