ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ 82 ಮನೆಗಳಿಗೆ ಹಾನಿ

Last Updated 6 ಆಗಸ್ಟ್ 2020, 15:02 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ತುಂತುರು ಮಳೆಯ ಪರಿಣಾಮ ಕಳೆದ ಆರುದಿನಗಳಲ್ಲಿ ಒಟ್ಟು 82 ಮನೆಗಳಿಗೆ ಹಾನಿಯಾಗಿದ್ದು, ₹27 ಲಕ್ಷ ನಷ್ಟ ಉಂಟಾಗಿದೆ.

ಹಾವೇರಿ–10, ಬ್ಯಾಡಗಿ–18, ಸವಣೂರ–30, ಶಿಗ್ಗಾವಿ–16, ಹಾನಗಲ್‌–8 ಸೇರಿದಂತೆ ಒಟ್ಟು 82 ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಹಾನಗಲ್‌ನಲ್ಲಿ ಒಂದು ಹೆಕ್ಟೇರ್‌ ಬೆಳೆ ನಾಶವಾಗಿದ್ದು, ₹50 ಸಾವಿರ ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಇದುವರೆಗೆ ಒಟ್ಟು 313 ಮನೆಗಳಿಗೆ ಹಾನಿಯಾಗಿದ್ದು, ₹55.92 ಲಕ್ಷ ನಷ್ಟ ಉಂಟಾಗಿದೆ. 786 ಹೆಕ್ಟೇರ್‌ ಬೆಳೆ ನಾಶವಾಗಿದ್ದು, ₹1.13 ಕೋಟಿ ನಷ್ಟ ಉಂಟಾಗಿದೆ. ಎರಡು ಜೀವ ಹಾನಿ ಮತ್ತು ಎರಡು ಪ್ರಾಣಿಗಳು ಮೃತಪಟ್ಟಿವೆ. ಒಟ್ಟಾರೆ ಜಿಲ್ಲೆಯಲ್ಲಿ ಮಳೆಯಿಂದ ಈ ವರ್ಷ ₹1.73 ಕೋಟಿ ನಷ್ಟ ಉಂಟಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮಾಹಿತಿ ನೀಡಿದ್ದಾರೆ.

ಮಳೆ ವಿವರ (ಮಿಲಿ ಮೀಟರ್‌ಗಳಲ್ಲಿ):ಹಾವೇರಿ–40.6, ರಾಣೆಬೆನ್ನೂರ–9.6, ಬ್ಯಾಡಗಿ–37, ಹಿರೇಕೆರೂರ–28.8, ಸವಣೂರ–40.3, ಶಿಗ್ಗಾವಿ–52.2, ಹಾನಗಲ್‌–47 ಮಿಲಿ ಮೀಟರ್‌ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT