ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೇಳಿದ ಅಧಿಕಾರಿಗೆ ಎತ್ತು ಕೊಡಲು ಮುಂದಾದ ರೈತ

Last Updated 10 ಮಾರ್ಚ್ 2023, 14:23 IST
ಅಕ್ಷರ ಗಾತ್ರ

ಹಾವೇರಿ: ಸವಣೂರು ಪುರಸಭೆಯಲ್ಲಿ ಲಂಚ ಕೇಳಿದ ಅಧಿಕಾರಿಗೆ, ನನ್ನ ಬಳಿ ₹25 ಸಾವಿರ ಹಣವಿಲ್ಲ, ನನ್ನ ಎತ್ತು ತೆಗೆದುಕೊಳ್ಳಿ ಎಂದು ರೈತನೊಬ್ಬ ಅಸಹಾಯಕತೆ ತೋಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಮನೆ ಖಾತೆ ಬದಲಾಯಿಸಲು ₹25 ಸಾವಿರ ಲಂಚ ಕೊಡುವಂತೆ ಅಧಿಕಾರಿಯೊಬ್ಬ ಬೇಡಿಕೆ ಇಟ್ಟಿದ್ದ.

ಎತ್ತು ಹಾಗೂ ಬಾರಕೋಲು ಸಮೇತ ಶುಕ್ರವಾರ ಪುರಸಭೆಗೆ ರೈತ ಯಲ್ಲಪ್ಪ ರಾಣೋಜಿ ಬಂದಿದ್ದರು.

"ಈ ಹಿಂದೆ ಹಣ ಕೊಟ್ಟಿದ್ದೆ. ಹಣ ತೆಗೆದುಕೊಂಡವರು ವರ್ಗಾವಣೆಯಾಗಿದ್ದಾರೆ. ಈಗ ಹೊಸದಾಗಿ ಬಂದ ಅಧಿಕಾರಿಗಳು ಮತ್ತೆ ₹25 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ" ಎಂದು ರೈತ ಯಲ್ಲಪ್ಪ ಅಳಲು ತೋಡಿಕೊಂಡರು.

ದುಡ್ಡು ಕೊಡುವ ತನಕ ಎತ್ತನ್ನು ನೀವೇ ಇಟ್ಟುಕೊಳ್ಳಿ ಎಂದು ಪುರಸಭೆ ಸಿಬ್ಬಂದಿಗೆ ರೈತ ಮನವಿ ಮಾಡಿದ.

ಯಲ್ಲಪ್ಪನ ನಡೆಗೆ ಪುರಸಭೆ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಸುತ್ತಮುತ್ತಲಿನ ಜನ ಸೇರಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸರಿಯಾಗಿ ಬುದ್ಧಿ ಕಲಿಸಿದ ಯಲ್ಲಪ್ಪನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT