ಹಿರೇಕೆರೂರು: ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎನ್.ಸುರೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಚನ್ನಳ್ಳಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶಿಷ್ಟವಾದ ಕಲೆ ಇರುತ್ತದೆ. ಹಳ್ಳಿಗಾಡಿನಲ್ಲಿ ಇರುವ ಪ್ರತಿ ಮಗು ಕೂಡಾ ಹಾಡುಗಳನ್ನು ಹೇಳುವುದು, ಚಿತ್ರಕಲೆ, ನೃತ್ಯ, ರಂಗೋಲಿ ಹೀಗೆ ವಿವಿಧ ಕಲೆಗಳಲ್ಲಿ ಜಾಣರಿರುತ್ತಾರೆ. ಅಂಥಹ ಪ್ರತಿಭೆಗಳನ್ನು ಗುರುತಿಸುವ ವೇದಿಕೆ ಕಲೋತ್ಸವ ಕಾರ್ಯಕ್ರಮ ಮಾಡುತ್ತವೆ ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಪಿ.ಎಸ್.ನಾಯಕ್ ಮಾತನಾಡಿ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಹೇಳಿದರು.
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯರ ನಾಗರಾಜ, ಗ್ರಾಮ ಪಂಚಾಯಿತಿ ಸದಸ್ಯರಾದ ಹೂವಪ್ಪ ವಡ್ಡಿನಕಟ್ಟಿ, ಬಣಕಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಪ್ಪಗೌಡರ, ಕೆ.ಜಿ. ಮಡಿವಾಳರ, ಎಂ.ಬಿ.ಹಾದಿಮನಿ, ನಾಗಪ್ಪ ಮಾಗನೂರ, ಬಿ.ಬಿ.ಕಣಸೋಗಿ ಇದ್ದರು.