ಗುರುವಾರ , ಸೆಪ್ಟೆಂಬರ್ 23, 2021
26 °C
ನಿವೃತ್ತ ನೌಕರನಿಂದ ಲಂಚ ಪಡೆಯುತ್ತಿದ್ದ ವೇಳೆ ದಾಳಿ

ಹಾವೇರಿ: ಎಸಿಬಿ ಬಲೆಗೆ ಕೃಷಿ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಿವೃತ್ತ ಸಿಬ್ಬಂದಿಯೊಬ್ಬರಿಂದ ₹15 ಸಾವಿರ ಲಂಚ ಪಡೆಯುವ ವೇಳೆ, ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. 

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಆಡಳಿತಾಧಿಕಾರಿ ಶ್ರೀಕಾಂತ ಹುಣಸಿಮರದ ಮತ್ತು ಕಚೇರಿ ಅಧೀಕ್ಷಕ ಚನ್ನವೀರಯ್ಯ ಹಿರೇಮಠ ಎಸಿಬಿ ಬಲೆಗೆ ಬಿದ್ದ ನೌಕರರು. 

ಕೃಷಿ ಇಲಾಖೆಯ ನಿವೃತ್ತ ನೌಕರ ಚನ್ನಬಸಪ್ಪ ಕೋರಿ ಅವರ ನಿವೃತ್ತಿ ವೇತನ ಬಿಡುಗಡೆಗಾಗಿ ₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ನಗರದ ಬಸ್‌ ನಿಲ್ದಾಣದ ಹೋಟೆಲ್‌ವೊಂದರಲ್ಲಿ ₹15 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ದಾಳಿಯ ಬಗ್ಗೆ ಎಸಿಬಿ ಅಧಿಕಾರಿಗಳು ಅಧಿಕೃತಿ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿರಲಿಲ್ಲ. ಈ ಪ್ರಕರಣ ಬೆಳಕಿಗೆ ಬಾರದಂತೆ ತಡೆಯಲು ಕಾಣದ ಕೈಗಳು ಕೆಲಸ ಮಾಡಿವೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.