ಅಕ್ಕಿಆಲೂರ (ಹಾವೇರಿ):ವೃದ್ಧಾಪ್ಯ ವೇತನ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಾನಗಲ್ ತಾಲ್ಲೂಕಿನ ಅರೆಲಕ್ಮಾಪುರದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಕುಂಚೂರ ಮತ್ತು ಗ್ರಾಮ ಸಹಾಯಕ ಮಂಜುನಾಥ ಹರಿಜನ ಅವರನ್ನು ಎಸಿಬಿ ಸಿಬ್ಬಂದಿ ಬಂಧಿಸಿದ್ದಾರೆ.
ಅರೆಲಕ್ಮಾಪುರ ಗ್ರಾಮದ ಸಹದೇವಪ್ಪ ಕರಬಣ್ಣನವರ ಎಂಬುವರು ವೃದ್ಧಾಪ್ಯ ವೇತನ ಮಂಜೂರು ಮಾಡುವಂತೆ 20 ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಲೇವಾರಿಗೆ ವಿಳಂಬ ಮಾಡುತ್ತಿದ್ದ ಗ್ರಾಮಲೆಕ್ಕಾಧಿಕಾರಿ ₹3,500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಹದೇವಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಗ್ರಾಮಲೆಕ್ಕಾಧಿಕಾರಿ ಸೂಚನೆಯ ಮೇರೆಗೆ ಮಂಜುನಾಥ ಹರಿಜನ ಅವರು ಸಹದೇವಪ್ಪ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಡಿವೈಎಸ್‍ಪಿ ಮಹಾಂತೇಶಜಿದ್ದಿ, ಇನ್ಸ್‍ಪೆಕ್ಟರ್‌ಗಳಾದ ಬಸವರಾಜ ಬುಡ್ನಿ, ಪ್ರಭಾವತಿ ಶೇತಸನದಿ, ಹವಾಲ್ದಾರ್ ಬಿ.ಎಸ್. ಕರಡಣ್ಣನವರ, ಸಿಬ್ಬಂದಿ ವಿಜಯಕುಮಾರ ಬಂಗಾರಿ, ಎಸ್.ಎನ್. ಕಡಕೋಳ, ವಿ.ವಿ.ಹುಲಿಹಳ್ಳಿ, ಎಂ.ಡಿ.ಲಂಗೋಟಿ, ಬಿ.ಎನ್.ಮೂಲಿಮನಿ, ಎಂ.ಎಸ್.ಕೊಂಬಳಿ, ಬಸಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.