ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸಂಕಲ್ಪದಿಂದ ಸಾಧನೆ ಸಾಧ್ಯ: ಬಿ.ಎಸ್. ಜಗದೀಶ್ವರ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಸಂಕಲ್ಪ 2023’ ಪ್ರೇರಣಾ ಕಾರ್ಯಾಗಾರ
Last Updated 12 ಮಾರ್ಚ್ 2023, 14:21 IST
ಅಕ್ಷರ ಗಾತ್ರ

ಹಾವೇರಿ: ‘ಉತ್ತಮ ಸಂಕಲ್ಪವನ್ನು ವಿದ್ಯಾರ್ಥಿಗಳು ಹೊಂದಿ ಆ ಸಂಕಲ್ಪವನ್ನು ಸಾಧಿಸುವ ದಿಕ್ಕಿನಲ್ಲಿ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಬಿ.ಎಸ್. ಜಗದೀಶ್ವರ ನುಡಿದರು.

ಹಾವೇರಿ ನಗರದ ಕೆಎಲ್ಇ ಸಂಸ್ಥೆಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ನಲ್ಲಿ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಾವೇರಿ ತಾಲ್ಲೂಕಿನ 600 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಸಂಕಲ್ಪ 2023’ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಎಸ್ಸೆಸ್ಸೆಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಹಂತವಾಗಿದ್ದು, ಇದರಲ್ಲಿ ಬಹಳ ಶ್ರಮಪಟ್ಟ ವಿದ್ಯಾರ್ಥಿಗಳು ಸಾಧನೆ ಮಾಡಿ ತಮ್ಮ ಪಾಲಕರಿಗೆ ಹಾಗೂ ಶಾಲೆಗೆ ಕೀರ್ತಿ ತರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ನುಡಿದರು.

ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಬಿ.ಎಂ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನ ತಂತ್ರಜ್ಞಾನದ ಯುಗವಾಗಲಿದ್ದು ಆ ಯುಗಕ್ಕೆ ತಕ್ಕಂತೆ ನಾವೆಲ್ಲ ತಯಾರಾಗಬೇಕಾಗಿದೆ ಎಂದು ನುಡಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಎಫ್.ಬಿ. ಮರಡೂರ, ಪಂಚಾಕ್ಷರಿ ಮೂರುಮಟ್ಟಿ, ವೀರೇಶ ಗಡ್ಡದೇವರಮಠ ಬಸವರಾಜ ಕೊರಗರ, ಸವಿತಾ ಕಲಿಕೇರಿ ಹಾಗೂ ಓಂ ಪ್ರಕಾಶ ಯತ್ತಿನಹಳ್ಳಿ ಮಾರ್ಗದರ್ಶನ ನೀಡಿದರು. ಮತ್ತು ಗೀತಾ ಬಿ.ಕೆ. ಉಪಪ್ರಾಚಾರ್ಯ ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬುದನ್ನು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ನಾಗರಾಜ ಇಚ್ಚಂಗಿ, ವಿಷಯ ಪರಿವೀಕ್ಷಕರಾದ ದೇವೇಂದ್ರಪ್ಪ ಬಸಮ್ಮನವರ, ಬಸನಗೌಡ ಪಾಟೀಲ, ಈರಪ್ಪ ಲಮಾಣಿ, ಅಕ್ಷರ ದಾಸೋಹದ ಪುಷ್ಪಲತಾ ಬಿದರಿ, ಶಿಕ್ಷಕ ಸಂಘದ ಸಂಘಟನೆಗಳ ಅಧ್ಯಕ್ಷರಾದ ಸೋಮಶೇಖರ ಅಡವಿ, ಎಸ್.ಎಂ ಪಾಟೀಲ, ರಮೇಶ್ ಎಂ.ಬಿ ಇದ್ದರು. ನಾಗರಾಜ ನಡುವಿನಮಠ ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT