ಹಾವೇರಿ: ಐಎಎಸ್, ಎಂಬಿಬಿಎಸ್, ಐಐಟಿಯಂಥ ಪರೀಕ್ಷೆಗಳನ್ನು ಎದುರಿಸುವಾಗ ವಿಫಲರಾದರೆ ಎದೆಗುಂದದೆ ಮರಳಿ ಯತ್ನಿಸಬೇಕು. ನಿರಂತರ ಪರಿಶ್ರಮ, ಶ್ರದ್ಧೆ, ಆಸಕ್ತಿಗಳೇ ಯಶಸ್ಸಿನ ಗುಟ್ಟು’ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಶನ್ ಹೇಳಿದರು.

ಹಾವೇರಿ ನಗರದ ಎಂ.ಆರ್.ಎಂ. ಪಿಯು ಕಾಲೇಜಿನಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ಐ.ಎ.ಎಸ್ ಅಧಿಕಾರಿಯಾಗಿ ಯಶಸ್ವಿಯಾಗಲು ಓದುವ ಕ್ರಮಗಳು ಮತ್ತು ವಿದ್ಯಾರ್ಥಿಗಳ ಶ್ರಮದ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಯೂಟ್ಯೂಬ್ ಪಾಠಗಳು ಸಹ ಪ್ರಯೋಜನಕಾರಿ ಎಂದು ವಿವರಿಸಿದರು.

ಡಿಡಿಪಿಯು ಡಾ.ಉಮೇಶಪ್ಪ ಎಚ್. ಅವರು ‘ಕರುಣಾಳು ಬಾ ಬೆಳಕೆ’ ಗೀತೆಯೊಂದಿಗೆ ತಮ್ಮ ಮಾತುಗಳನ್ನು ಆರಂಭಿಸಿ, ಮಕ್ಕಳು ತಮ್ಮ ಅಂಕಪಟ್ಟಿಯನ್ನು ವೀಕ್ಷಿಸುವಾಗ ತಮ್ಮ ತಂದೆ, ತಾಯಿ ಮತ್ತು ಬಂಧು ಬಳಗದವರ ಮುಖಗಳನ್ನು ನೆನಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಎಂ.ಆರ್.ಎಂ. ಸಂಸ್ಥೆಯ ಅಧ್ಯಕ್ಷ ಡಾ.ಎಂ.ರಾಮ ಮೋಹನ ರಾವ್ ಮಾತನಾಡಿ, ಎಂ.ಆರ್.ಎಂ ಕಾಲೇಜಿನಿಂದ ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್ (ಆಯುರ್ವೇದ) ಮತ್ತು ಐ.ಐ.ಟಿ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಕ್ಕೆ ಪಾಲಕರಿಗೆ ಮತ್ತು ಮಕ್ಕಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.