ಬುಧವಾರ, ಮಾರ್ಚ್ 29, 2023
32 °C

ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ: ಪ್ರೊ.ಐ.ಜಿ.ಸನದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಕೆ.ಬಿ.ಕೋಳಿವಾಡ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಜನ ಸೇವೆಯೇ ಜನಾರ್ಧನ ಸೇವೆ ಎಂಬ ಮನೋವೃತ್ತಿಯನ್ನಿಟ್ಟುಕೊಂಡು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಹೇಳಿದರು.

ಇಲ್ಲಿನ ವಿನಾಯಕನಗರದ ಗಣೇಶ ದೇವಸ್ಥಾನದ ಎದುರಿಗೆ ನೂತನವಾಗಿ ನಿರ್ಮಿಸಿದ ಕೆ.ಬಿ.ಕೋಳಿವಾಡ ಸಭಾಭವನ, ಕಾಂಗ್ರೆಸ್‌ ಗ್ರಾಮೀಣ ಹಾಗೂ ನಗರ ಕಚೇರಿ ಉದ್ಘಾಟನೆ ಮತ್ತು ಕೆ.ಬಿ.ಕೋಳಿವಾಡ ಅವರ 78 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1972ರಿಂದ ವಿಧಾನಸಭೆ ಪ್ರವೇಶಿಸಿದ ಕೆ.ಬಿ.ಕೋಳಿವಾಡ ಅವರು ಕೃಷಿ, ಶಿಕ್ಷಣ, ಸಹಕಾರ, ಪಂಚಾಯತ್‌ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ನೀರಾವರಿ ವಲಯಗಳಲ್ಲಿ ಆಸಕ್ತಿಯಿಂದ ಕ್ರೀಯಾಶೀಲ ಸೇವೆ ಮಾಡುವ ಸಾರ್ವಜನಿಕ ಸೇವಕರು. ಸಾರ್ವಜನಿಕ ಕ್ಷೇತ್ರದಲ್ಲಿ ಜನ ಮೆಚ್ಚುವಂತೆ ಕೆಲಸ ಮಾಡಿದವರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕೆ.ಬಿ.ಕೋಳಿವಾಡ ಅಭಿಮಾನಿಗಳು ವೇದಿಕೆಯಲ್ಲಿ ಬೃಹತ್‌ ಕೇಕ್‌ ಕಟ್‌ ಮಾಡಿ ಕೋಳಿವಾಡ ಅವರ 78 ನೇ ಜನ್ಮದಿನಾಚರಣೆಯನ್ನು ಆಚರಿಸಿದರು. ಸಾವಿರಾರು ಅಭಿಮಾನಿಗಳು ಶಾಲು ಹೊದಿಸಿ ಸನ್ಮಾನಿಸಿ ಜನ್ಮ ದಿನಾಚರಣೆ ಶುಭ ಕೋರಿದರು. ನಂತರ ಕೆ.ಬಿ.ಕೋಳಿವಾಡ ಅವರು ತಮ್ಮ ಮನದಾಳದ ಮಾತುಗಳನ್ನಾಡಿದರು.

ಡಾ.ಆರ್‌.ಎಂ.ಕುಬೇರಪ್ಪ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಕೋಳಿವಾಡ, ಏಕನಾಥ್ ಭಾನುವಾಳ್ಳಿ, ರುಕ್ಮಿಣಿ ಸಾವಕಾರ, ಚಂಪಕ್ಕ ಬಿಸನಹಳ್ಳಿ, ವಾಸುದೇವ ಲದ್ವಾ, ನೀಲಕಂಠಪ್ಪ ಕುಸಗೂರ್, ಸಿ. ಎಂ. ಕುಲಕರ್ಣಿ, ಆರ್.ಎಂ. ಕುಬೇರಪ್ಪ, ಮಂಜನಗೌಡ ಪಾಟೀಲ, ವಿರೇಶ ಮೋಟಗಿ, ಜೆಟ್ಟೆಪ್ಪ ಕರೇಗೌಡ್ರ, ಬಸವರಾಜಪ್ಪ ಸವಣೂರ, ಎ. ಎಂ. ನಾಯಕ್, ಬಸನಗೌಡ ಮರದ, ರಾಮಣ್ಣ ನಾಯಕ, ಮಂಜನಗೌಡ ಪಾಟೀಲ, ಶೇರ್ ಕಾನ್ ಖಾಬುಲಿ, ಸಣ್ಣತಮ್ಮಪ್ಪ ಬಾರ್ಕಿ, ಕೃಷ್ಣಪ್ಪ ಕಂಬಳಿ, ಇರ್ಪಾನ ದಿಡಗೂರ, ರತ್ನಾ ಪುನೀತ್, ರವೀಂದ್ರ ಗೌಡ ಪಾಟೀಲ, ಇಕ್ಬಾಲಸಾಬ್‌ ರಾಣೆಬೆನ್ನೂರು, ಬಿ.ಬಿ.ನಂದ್ಯಾಲ, ತಿರುಪತಿ ಅಜ್ಜನವರ, ಮಧು ಕೋಳಿವಾಡ, ವೀರನಗೌಡ ಪೊಲೀಸ್‌ಗೌಡ್ರ, ಸೀತಾರಾಮರಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು