‘ಅಲೆಮಾರಿ ಅಹವಾಲು ಆಲಿಸಿ’

7
ಅಲೆಮಾರಿ ಬುಡಕಟ್ಟು ಸಮುದಾಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಬಾದಗಿ

‘ಅಲೆಮಾರಿ ಅಹವಾಲು ಆಲಿಸಿ’

Published:
Updated:

ಹಾವೇರಿ: ಅಲೆಮಾರಿ ಜನಾಂಗದವರು ವಾಸ್ತವ್ಯವಿರುವ ನಿವೇಶನಗಳ ಪಟ್ಟಾ ನೀಡಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅಲೆಮಾರಿ ಬುಡಕಟ್ಟು ಸಮುದಾಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಬಾದಗಿ ಆಗ್ರಹಿಸಿದರು.

‘40 ವರ್ಷಗಳಿಂದ ವಾಸಿಸುತ್ತಿರುವ, ಸುಮಾರು 20ಸಾವಿರಕ್ಕೂ ಹೆಚ್ಚು ಅಲೆಮಾರಿ ಜನಾಂಗದವರು ಇದ್ದಾರೆ. ಇದುವರೆಗೆ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಸರ್ಕಾರಿ ಯೋಜನೆಗಳೂ ಅಲೆಮಾರಿ ಜನಾಂಗಕ್ಕೆ ತಲುಪುತ್ತಿಲ್ಲ. ಈ ಕುರಿತು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ, ಪ್ರಯೋಜನ ಆಗಿಲ್ಲ. ದಯವಿಟ್ಟು ಸ್ಪಂದಿಸಿ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಅಲವತ್ತುಕೊಂಡರು.

ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಕೇಳಲು ಜನಪ್ರತಿನಿಧಿಗಳೇ ಇಲ್ಲದಂತಾಗಿದೆ. ಅದಕ್ಕಾಗಿ, ಅಲೆಮಾರಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೀಸಲಾತಿ ಕಲ್ಪಿಸಬೇಕು ಎಂದ ಅವರು, ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೂ, ಯಾರೂ ಕೇಳುತ್ತಿಲ್ಲ’ ಎಂದು ನೋವು ತೋಡಿಕೊಂಡರು.

ಸಮುದಾಯಕ್ಕೆ ರುದ್ರಭೂಮಿ, ಅಂಗನವಾಡಿ, ಸರ್ಕಾರಿ ಶಾಲೆ, ನಿವೇಶನ, ಜಮೀನು, ಉದ್ಯೋಗವನ್ನು ಕಲ್ಪಿಸಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಗುತ್ತಲದಲ್ಲಿ ಅಂಗನವಾಡಿಗಳು ಗ್ರಾಮದಿಂದ ಎರಡು ಕಿ.ಮೀ. ದೂರವಿದ್ದು, ಮಕ್ಕಳು ಕಷ್ಟಪಡುವಂತಾಗಿದೆ ಎಂದು ಹಸೀನಾ ಹೆಡಿಯಾಲ ಹೇಳಿದರು.

ಅಖಿಲ ಕರ್ನಾಟಕ ಸುಡಗಾಡ ಸಿದ್ದರ ಸಂಘದ ಉಪಾಧ್ಯಕ್ಷ ಹನುಮಂತಪ್ಪ, ಜಿಲ್ಲಾ ಸಂಚಾಲಕರಾದ ಮುಕ್ತಾಬಾಯಿ ಗುತ್ತಲ, ಫಕ್ಕೀರಪ್ಪ ಗುತ್ತಲ, ರಾಮಕೃಷ್ಣ ಗುತ್ತಲ, ಬಸವರಾಜ ಬಾದಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !