ಶುಕ್ರವಾರ, ನವೆಂಬರ್ 27, 2020
19 °C

ಎಪಿಎಂಸಿ ಮಸೂದೆ ರೈತರ ಪರ: ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಎಪಿಎಂಸಿ ತಿದ್ದುಪಡಿ ಮಸೂದೆ ರೈತರ ಪರವಾಗಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯದಿದ್ದರೆ ರೈತರಿಗೆ ದಂಡ ವಿಧಿಸಲಾಗುತ್ತಿತ್ತು. ಹೊರ ರಾಜ್ಯದಲ್ಲಿ ರೈತರನ್ನು ತಡೆಯುತ್ತಿದ್ದರು. ಇಂದು ಇಡೀ ದೇಶದಲ್ಲಿ ಒಂದು ಮಾರುಕಟ್ಟೆ, ಒಂದು ಬೆಳೆ, ಒಂದು ದೇಶ ಎಂಬ ಕಾನೂನು ತರಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥಿಸಿಕೊಂಡರು. 

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಭೌಗೋಳಿಕ ವಿಸ್ತೀರ್ಣ 190 ಲಕ್ಷ ಹೆಕ್ಟೇರ್‌ ಇದ್ದು, ಕೃಷಿಗೆ ಯೋಗ್ಯವಾದ ಭೂಮಿ 118 ಲಕ್ಷ ಹೆಕ್ಟೇರ್ ಮಾತ್ರ. ಬಂಜರು ಭೂಮಿ 7.69 ಲಕ್ಷ ಹೆಕ್ಟೇರ್ ಇದ್ದು, ಕೃಷಿ ಮಾಡುವವರು ಇಲ್ಲದ ಕಾರಣ 15.35 ಲಕ್ಷ ಹೆಕ್ಟೇರ್‌ ಭೂಮಿ ಬೀಳು ಬಿದ್ದಿದೆ ಎಂದರು. 

ಇಲ್ಲಿಯವರೆಗೂ ರೈತರು ಮಾತ್ರ ಭೂಮಿ ಖರೀದಿ ಮಾಡಬೇಕು ಎಂಬ ಕಾನೂನಿತ್ತು. ಭೂ ಸುಧಾರಣೆಯಿಂದ ಹೊಸಬರಿಗೆ, ಯುವಕರಿಗೆ ಅವಕಾಶ ಸಿಕ್ಕಂತಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ, ಕೆಲ ರೈತ ಸಂಘಟನೆಗಳು ದುರುದ್ದೇಶಪೂರ್ವಕವಾಗಿ ವಿರೋಧ ಮಾಡುತ್ತಿವೆ ಎಂದು ಟೀಕಿಸಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು