ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಆಶಾ ಕಾರ್ಯಕರ್ತೆ, ಗರ್ಭಿಣಿಗೂ ಕೊರೊನಾ ವೈರಸ್‌ ಸೋಂಕು

ಮತ್ತೆ ಮೂವರಿಗೆ ಕೋವಿಡ್‌–19: ಜಿಲ್ಲೆಯಲ್ಲಿ 41ಕ್ಕೇರಿದ ಪ್ರಕರಣಗಳು
Last Updated 21 ಜೂನ್ 2020, 14:12 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆ ಸೇರಿದಂತೆ ಭಾನುವಾರ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 41 ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 20 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಶಿಗ್ಗಾವಿ ನಗರದ ಪಿ-6832 ಸೋಂಕಿತ ಇಂದು ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಲು ಕಾರಣವಾಗಿದ್ದಾನೆ. ಈತನ ಪ್ರಾಥಮಿಕ ಸಂಪರ್ಕದಿಂದ ಶಿಗ್ಗಾವಿ ದೇಸಾಯಿಗಲ್ಲಿಯ 45 ವರ್ಷದ ಪಿ-8698 ಮಹಿಳೆಗೆ ಭಾನುವಾರ ಸೋಂಕು ದೃಢಪಟ್ಟಿದೆ. ಜಿಲ್ಲೆಯ 40ನೇ ಸೋಂಕಿತೆ ಸವಣೂರಿನ 23 ವರ್ಷದ ಪಿ-8699 ಗರ್ಭಿಣಿ ಹಾಗೂ 41ನೇ ಪ್ರಕರಣ ಪಿ- 8700 ಸವಣೂರು ತಾಲ್ಲೂಕು ಕಾರಡಗಿಯ ಅಶಾ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.

ಪ್ರವಾಸ ಹಿನ್ನೆಲೆ: P-8698 45 ವರ್ಷದ ಮಹಿಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಶಿಗ್ಗಾವಿ ನಗರದ ದೇಸಾಯಿಗಲ್ಲಿ ವಾಸವಾಗಿದ್ದು, P-6832 ಸೋಂಕಿತನ ಪ್ರಾಥಮಿಕ ಸಂಪರ್ಕದ ಕಾರಣ ಜೂನ್ 17ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 21ರಂದು ಪಾಸಿಟಿವ್ ವರದಿ ಬಂದ ಕಾರಣ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಿ-8699 ಮಹಿಳೆ ಹೆರಿಗೆಗೆ ತನ್ನ ತವರು ಮನೆ ಸವಣೂರಿಗೆ ಬಂದಿದ್ದು, ಗರ್ಭಿಣಿಯನ್ನು ಪರೀಕ್ಷೆ ಮಾಡಿ ಜೂನ್ 19 ರಂದು ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 21ರಂದು ಪಾಸಿಟಿವ್ ವರದಿ ಬಂದ ಕಾರಣ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಿ-8700 ಮಹಿಳೆ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಪತಿಯೊಂದಿಗೆ ಸವಣೂರು ತಾಲ್ಲೂಕು ಕಾರಡಗಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಆಶಾ ಕಾರ್ಯಕರ್ತೆಯರ ನಿಯಮಿತ ತಪಾಸಣಾ ಸಮಯದಲ್ಲಿ ಸೋಂಕು ದೃಢಪಟ್ಟ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಜೂನ್ 19ರಂದು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 21ರಂದು ಪಾಸಿಟಿವ್ ವರದಿ ಬಂದಕಾರಣ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಂಟೈನ್ಮೆಂಟ್ ಘೋಷಣೆ: ಪಿ-8698 ನಿವಾಸದ ಪ್ರದೇಶವಾದ ಶಿಗ್ಗಾವಿ ನಗರದ ಗೌಡರ ಓಣಿಯ ಹಾಗೂ ದೇಸಾಯಿಗಲ್ಲಿ ರಸ್ತೆಯೊಳಗೊಂಡಿರುವ 100 ಮೀಟರ್‌ ಪ್ರದೇಶವನ್ನು ಕಂಟೈನ್ಮೆಂಟ್‌ ವಲಯವಾಗಿ ಪರಿವರ್ತಿಸಲಾಗಿದೆ. ಸುತ್ತಲಿನ 200 ಮೀ. ಪ್ರದೇಶವನ್ನು ‘ಬಫರ್ ಜೋನ್’ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಶಿಗ್ಗಾವಿ ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪಿ–8699 ಮಹಿಳೆಯ ನಿವಾಸವಿರುವ ಸವಣೂರು ಪಟ್ಟಣದ ಲಾಲಸಾ ಕಟ್ಟಿ ಖಾದರ್ ಬಾಗ್ ಓಣಿ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಹಾಗೂ ಸುತ್ತಲಿನ 200 ಮೀಟರ್ ಪ್ರದೇಶವೆಂದು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಪಿ-8700ರ ಪಾಸಿಟಿವ್ ಮಹಿಳೆಯ ನಿವಾಸವಿರುವ ಕಾರಡಗಿಯ ದೇಸಾಯಿ ಓಣಿಯ 100 ಪ್ರದೇಶವನ್ನು ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಹಾಗೂ ಸುತ್ತಲಿನ 200 ಮೀಟರ್ ಪ್ರದೇಶವೆಂದು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಇನ್ಸಿಡೆಂಟ್ ಕಮಾಂಡರ್ ಆಗಿ ಸವಣೂರು ತಹಶೀಲ್ದಾರ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT