ಶನಿವಾರ, ಮಾರ್ಚ್ 28, 2020
19 °C

ಸುಳ್ಳು ಸುದ್ದಿ ಹರಡಿದ ಆಯುರ್ವೇದಿಕ್‌ ವೈದ್ಯ: ಶಾಸಕರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರದ ಆಯುರ್ವೇದಿಕ್‌ ವೈದ್ಯ ಶರಣು ಅಂಗಡಿ ಎಂಬಾತ, ವೈದ್ಯರ ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರಲ್ಲಿ ಹಾವೇರಿಯಲ್ಲಿ ಕೊರೊನಾ ಪ್ರಕರಣವೊಂದು ಖಚಿತವಾಗಿದೆ ಎಂದು ಪೋಸ್ಟ್‌ ಹಾಕಿದ್ದ. 

ಈತನನ್ನು ಶಾಸಕ ನೆಹರು ಓಲೇಕಾರ ಮತ್ತು ಡಿಎಚ್‌ಒ ಅವರು ನಗರದ ಪ್ರವಾಸಿ ಮಂದಿರಕ್ಕೆ ಶನಿವಾರ ಕರೆಸಿ, ವಿಚಾರಿಸಿದರು. ಆತ ‘ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ಆ ಪೋಸ್ಟ್‌ ಅನ್ನು ಫಾರ್ವರ್ಡ್‌ ಮಾಡಿದ್ದೇನೆ. ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಗೋಗರೆದ. 

ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದೇನೆ ಎಂದು ಡಿಎಚ್‌ಒ ರಾಜೇಂದ್ರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು