ಹಾವೇರಿ: ‘ನಮ್ಮ ಬ್ಯಾಡಗಿ ಪಟ್ಟಣ, ಹೆಸರಿಗಷ್ಟೇ ‘ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ’. ನಿತ್ಯವೂ ಮೆಣಸಿನಕಾಯಿ ಚೀಲಗಳನ್ನು ಹೊತ್ತ ನೂರಾರು ವಾಹನಗಳು ಬಂದು ಹೋಗುತ್ತವೆ. ವ್ಯಾಪಾರಿಗಳು ಹಾಗೂ ಸ್ಥಳೀಯರ ಸಂಚಾರಕ್ಕೆಂದು ಪಟ್ಟಣದಲ್ಲಿ ಸುಮಾರು 700 ಆಟೊಗಳಿವೆ. ಆದರೆ, ಈ ಆಟೊಗಳಿಗೆ ಅಗತ್ಯವಿರುವ ಎಲ್ಪಿಜಿ ಹಾಗೂ ಸಿಎನ್ಜಿ ಬಂಕ್ಗಳು ಮಾತ್ರ ಬ್ಯಾಡಗಿಯಲ್ಲಿಲ್ಲ. ಅದಕ್ಕಾಗಿ ಚಾಲಕರು, ಕಿ.ಮೀ.ಗಟ್ಟಲೇ ದೂರವಿರುವ ಹಾವೇರಿ ಹಾಗೂ ರಾಣೆಬೆನ್ನೂರಿಗೆ ಅಲೆದಾಡುವ ಸ್ಥಿತಿಯಿದೆ’.

ಮೆಣಸಿನಕಾಯಿ ಮಾರಾಟದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ಯಾಡಗಿ ಪಟ್ಟಣದಲ್ಲಿರುವ ಆಟೊ ಚಾಲಕ ಕಲ್ಲಪ್ಪ ದೇವರಗುಡ್ಡ ಅವರ ನೋವಿನ ಮಾತಿದು.

ಜಿಲ್ಲಾ ಕೇಂದ್ರ ಹಾವೇರಿಯಿಂದ 18 ಕಿ.ಮೀ. ದೂರದಲ್ಲಿರುವ ಬ್ಯಾಡಗಿ ಪಟ್ಟಣದಲ್ಲಿ ಇದುವರೆಗೂ ಒಂದೂ ಆಟೊ ಎಲ್ಪಿಜಿ ಹಾಗೂ ಸಿಎನ್ಜಿ ಬಂಕ್ ಸ್ಥಾಪನೆಯಾಗಿಲ್ಲ. ಕಂಪನಿಗಳು ಸಹ ಬ್ಯಾಡಗಿಯಲ್ಲಿ ಬಂಕ್ ಸ್ಥಾಪನೆಗೆ ಯಾವುದೇ ಅಧಿಸೂಚನೆಯನ್ನೂ ಹೊರಡಿಸಿಲ್ಲ. ಏಜೆನ್ಸಿಗಾಗಿ ಅರ್ಜಿಯನ್ನೂ ಕರೆದಿಲ್ಲ. ತಂತ್ರಜ್ಞಾನ ಬೆಳವಣಿಗೆಯಾಗಿದ್ದರೂ ಬ್ಯಾಡಗಿಯಲ್ಲಿ ಎಲ್ಪಿಜಿ–ಸಿಎನ್ಜಿ ಬಂಕ್ ಇಲ್ಲದಿರುವುದು ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಪೆಟ್ರೋಲ್– ಡೀಸೆಲ್ಗಷ್ಟೇ ಬ್ಯಾಡಗಿ ಸೀಮಿತವಾಗಿದೆ.

ನಿತ್ಯವೂ ಪಟ್ಟಣದಲ್ಲಿ ಆಟೊಗಳು ಓಡಾಡುತ್ತಿದ್ದರೂ ಅವುಗಳಿಗೆ ಸ್ಥಳೀಯವಾಗಿ ಎಲ್ಪಿಜಿ– ಸಿಎನ್ಜಿ ಸಿಗುತ್ತಿಲ್ಲ. ಆಟೊ ಚಾಲನೆಯಿಂದ ಬದುಕು ಕಟ್ಟಿಕೊಂಡಿರುವ ಚಾಲಕರು, ಬ್ಯಾಡಗಿಯಿಂದ 23 ಕಿ.ಮೀ. ದೂರದಲ್ಲಿರುವ ಹಾವೇರಿಯ ಎಲ್ಪಿಜಿ ಬಂಕ್ ಹಾಗೂ 20 ಕಿ.ಮೀ. ದೂರದಲ್ಲಿರುವ ರಾಣೆಬೆನ್ನೂರಿನಲ್ಲಿರುವ ಬಂಕ್ಗೆ ಹೋಗಿ ಎಲ್ಪಿಜಿ ಹಾಕಿಸಿಕೊಂಡು ಬರುತ್ತಿದ್ದಾರೆ. ಬಂಕ್ಗೆ ಹೋಗಿ ಬರುವ ಮಾರ್ಗದಲ್ಲಿಯೇ, 1ರಿಂದ 2 ಕೆ.ಜಿ. ಎಲ್ಪಿಜಿ ವ್ಯಯವಾಗುತ್ತಿದೆ.

ಬ್ಯಾಡಗಿಯಿಂದ 6 ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮೋಟೆಬೆನ್ನೂರಿನಲ್ಲಿ ಸಿಎನ್ಜಿ ಬಂಕ್ ಇದೆ. ಬ್ಯಾಡಗಿಯಲ್ಲಿರುವ ಸಿಎನ್ಜಿ ಅವಲಂಬಿತ ವಾಹನಗಳು, ಮೋಟೆಬೆನ್ನೂರಿಗೆ ಇಂಧನಕ್ಕಾಗಿಯೇ ಹೋಗಿ ಬರುತ್ತಿವೆ. ಪಟ್ಟಣದಲ್ಲಿ ಸಿಎನ್ಜಿ ಆಟೊಗಳ ಸಂಖ್ಯೆ ತೀರಾ ಕಡಿಮೆಯಿದೆ. ಆದರೆ, ಎಲ್ಪಿಜಿ ಆಟೊಗಳ ಸಂಖ್ಯೆ ಹೆಚ್ಚಿದೆ. ಎಲ್ಪಿಜಿ ಹಾಗೂ ಸಿಎನ್ಜಿ ಎರಡೂ ಪ್ರಕಾರದ ಬಂಕ್ಗಳನ್ನು ಬ್ಯಾಡಗಿಯಲ್ಲಿಯೇ ಸ್ಥಾಪಿಸಬೇಕೆಂದು ಆಟೊ ಚಾಲಕರು ಒತ್ತಾಯಿಸುತ್ತಿದ್ದರೂ, ಇದುವರೆಗೂ ಬೇಡಿಕೆ ಈಡೇರಿಲ್ಲ.

ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಣಸಿನಕಾಯಿ ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಸತಿ ಪ್ರದೇಶ ಸೇರಿದಂತೆ ಹಲವು ಸ್ಥಳಗಳನ್ನು ಒಳಗೊಂಡು ಬ್ಯಾಡಗಿ ಪಟ್ಟಣವು ಬೆಳವಣಿಗೆ ಆಗುತ್ತಿದೆ. ಉದ್ಯೋಗ, ವ್ಯಾಪಾರ, ಶೈಕ್ಷಣಿಕ ಹಾಗೂ ಇತರೆ ಉದ್ದೇಶಕ್ಕಾಗಿ ಜನರು ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ಸಂಚರಿಸುತ್ತಿದ್ದಾರೆ. ಸ್ವಂತ ವಾಹನ ಇಲ್ಲದವರು, ಆಟೊಗಳನ್ನು ಅವಲಂಬಿಸಿದ್ದಾರೆ. ಆದರೆ, ಇಂಧನಕ್ಕಾಗಿ ಆಟೊ ಚಾಲಕರು ಯಾತನೆ ಅನುಭವಿಸುತ್ತಿದ್ದಾರೆ.

‘ಕೆಂಪು ಸುಂದರಿ’, ‘ಕೆಂಪು ಚಿನ್ನ’ ಖ್ಯಾತಿಯ ಮೆಣಸಿನಕಾಯಿ ಮಾರಾಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಬ್ಯಾಡಗಿ ಪಟ್ಟಣದಲ್ಲಿ, ಎಲ್ಪಿಜಿ ಹಾಗೂ ಸಿಎನ್ಜಿ ಬಂಕ್ ಇಲ್ಲದಿರುವ ನೋವು ಚಾಲಕರನ್ನು ಕಾಡುತ್ತಿದೆ. ‘ಮೂಲ ಸೌಕರ್ಯ ಕಲ್ಪಿಸಲಾಗುವುದು’ ಎಂಬ ಆಶ್ವಾಸನೆ ನೀಡಿ ವಿಧಾನಸಭೆ – ಲೋಕಸಭೆಗೆ ಹೋಗುವ ಜನಪ್ರತಿನಿಧಿಗಳು, ಜನರ ಸಮಸ್ಯೆಗಳನ್ನು ಮರೆತು ಓಡಾಡುತ್ತಿದ್ದಾರೆ. ಗುದ್ದಲಿ ಪೂಜೆ, ಅಧಿಕಾರಿಗಳ ಸಭೆ ಹಾಗೂ ಕಾಮಗಾರಿ ಪೂಜೆಯಲ್ಲಷ್ಟೇ ಕಾಣಿಸಿಕೊಳ್ಳುವ ಜನಪ್ರತಿನಿಧಿಗಳು, ಜನರ ಅಗತ್ಯ ಸೇವೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ದುಡಿಮೆಗೆ ಆಧಾರವಾಗಿರುವ ಆಟೊಗಳಿಗೆ ಇಂಧನ ತುಂಬಿಸಲು, ದೂರದ ಊರುಗಳಿಗೆ ಹೋಗಿ ಬರಬೇಕಾದ ಅನಿವಾರ್ಯವೂ ಇದೆ.

‘ಬ್ಯಾಡಗಿ ಪಟ್ಟಣದಲ್ಲಿ ಆಟೊ ಚಾಲಕರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಪಿಜಿ ಹಾಗೂ ಸಿಎನ್ಜಿಗಾಗಿ, ದುಡಿದ ಹಣವನ್ನೇ ಖರ್ಚು ಮಾಡಿಕೊಂಡು ದೂರದ ಊರುಗಳಿಗೆ ಹೋಗಿ ಬರಬೇಕಾಗಿದೆ. ಇದರಿಂದ ಇಂಧನ ಹಾಗೂ ಹಣ ಎರಡೂ ವ್ಯರ್ಥವಾಗುತ್ತಿದೆ. ನಮ್ಮೂರಿನಲ್ಲಿಯೇ ಬಂಕ್ ಸ್ಥಾಪನೆಯಾದರೆ, ಚಾಲಕರು ಬದುಕುತ್ತಾರೆ. ಇಲ್ಲದಿದ್ದರೆ, ಸ್ಥಿತಿ ಮತ್ತಷ್ಟು ಹದಗೆಡಲಿದೆ’ ಎಂದು ಆಟೊ ಚಾಲಕರು–ಮಾಲೀಕರ ಸಂಘದ ಬ್ಯಾಡಗಿ ಘಟಕದ ಅಧ್ಯಕ್ಷ ಸುರೇಶ ಅವರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಬ್ಯಾಡಗಿ ಪಟ್ಟಣದ ವ್ಯಾಪ್ತಿಯಲ್ಲಿ ಆಟೊ ಎಲ್ಪಿಜಿ ಹಾಗೂ ಸಿಎನ್ಜಿ ಬಂಕ್ ತೆರೆಯುವಂತೆ ಆಗ್ರಹಿಸಿ ಹೋರಾಟ ಆರಂಭಿಸಿದ್ದೇವೆ. ಸರ್ಕಾರವಾಗಲಿ ಅಥವಾ ಖಾಸಗಿಯವರಾಗಲಿ, ತ್ವರಿತವಾಗಿ ಬಂಕ್ ನಿರ್ಮಿಸಿ ಇಂಧನ ಲಭ್ಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪತ್ರ ಬರೆದ ಗ್ಯಾರಂಟಿ ಉಪಾಧ್ಯಕ್ಷ: ಬಂಕ್ ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಿರುವ ಆಟೊ ಚಾಲಕರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಪಾಟೀಲ, ‘ಬ್ಯಾಡಗಿಯಲ್ಲಿ ಎಲ್ಪಿಜಿ ಸಿಗುವಂತೆ ಮಾಡಿ, ಚಾಲಕರ ನೋವಿಗೆ ಸ್ಪಂದಿಸಿ’ ಎಂದು ಕೋರಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಎಸ್.ಆರ್. ಪಾಟೀಲ, ‘ಬ್ಯಾಡಗಿಯಲ್ಲಿ ಆಟೊ ಎಲ್ಪಿಜಿ–ಸಿಎನ್ಜಿ ಇಲ್ಲವೇ ಇಲ್ಲ. ಅದನ್ನು ಅವಲಂಬಿಸಿದ ವಾಹನಗಳು, ಹಾವೇರಿ–ರಾಣೆಬೆನ್ನೂರಿಗೆ ಹೋಗಿ ಬರುವುದು ಅನಿವಾರ್ಯವಾಗಿದೆ. ಚಾಲಕರೆಲ್ಲರೂ ಬಂದು ಮನವಿ ಕೊಟ್ಟಿದ್ದಾರೆ. ಎಲ್ಪಿಜಿ–ಸಿಎನ್ಜಿ ಬಂಕ್ ಆರಂಭಿಸುವವರೆಗೂ ಚಾಲಕರ ಪರವಾಗಿ ನಿಲ್ಲುತ್ತೇನೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-1578381591

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.