ಭಾರತ ಬಂದ್ ನಾಳೆ: ಶಿಡೇನೂರ

7

ಭಾರತ ಬಂದ್ ನಾಳೆ: ಶಿಡೇನೂರ

Published:
Updated:

ಹಾವೇರಿ: ತೈಲ ಬೆಲೆಯೇರಿಕೆ ವಿರೋಧಿಸಿ ಸೆ. 10ರಂದು ಭಾರತ್‌ ಬಂದ್‌ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಸಿ.ಶಿಡೇನೂರ ಹೇಳಿದರು.

‘ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಲೀಟರ್ ಪೆಟ್ರೋಲ್‌ಗೆ ₹ 71 ಮತ್ತು ಡೀಸೆಲ್‌ಗೆ ₹ 57.60ಇದ್ದ ದರವು ಈಗ ಬಿಜೆಪಿಯ ಆಡಳಿತದಲ್ಲಿ ₹ 83 ಮತ್ತು ₹ 74ಕ್ಕೆ ಏರಿದೆ. ಅಡುಗೆ ಅನಿಲ ದರವು ₹ 450ರಿಂದ ₹ 850ಕ್ಕೆ ಏರಿದೆ. ಇದನ್ನು ಖಂಡಿಸಿ ಜನ ಸ್ವಯಂಪ್ರೇರಣೆಯಿಂದ ಬಂದ್ ನಡೆಸುತ್ತಿದ್ದು, ನಾವು ಬೆಂಬಲಿಸುತ್ತೇವೆ’ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಚ್ಛೇದಿನ್’ ಬರಲಿದೆ ಎಂದು ಬಿಜೆಪಿ ಹೇಳಿತ್ತು. ಆದರೆ, ಭಾರತೀಯರಿಗೆ ಕಷ್ಟಕರ ದಿನಗಳು ಬಂದಿವೆ. ಬೆಲೆಯೇರಿಕೆಯಿಂದ ಸಾಮಾನ್ಯ, ಬಡ ಜನರ ಬದುಕು ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಮುಂದಾಗಿವೆ ಎಂದರು.

ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿದೆಯೇ ಹೊರತು, ಮಾರುಕಟ್ಟೆಯಲ್ಲಿ ಖರೀದಿಗೆ ಅನುದಾನ ಹಾಗೂ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೂ ಖರೀದಿ ಕೇಂದ್ರ ತೆರೆಯುವುದು ಕಷ್ಟವಾಗಿದೆ ಎಂದು ದೂರಿದರು.

ಲೋಕಸಭೆ ಅಭ್ಯರ್ಥಿ ಬದಲು

ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸೆ. 28ರಂದು ಜಿಲ್ಲೆಯ ಮುಖಂಡರ ಸಭೆ ನಡೆಯಲಿದೆ. ಆ ಬಳಿಕ ಗದಗದಲ್ಲೂ ಸಭೆ ನಡೆಯಲಿದೆ. ರೋಣಾದ ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಪಕ್ಷವು ಉಸ್ತುವಾರಿ ನೀಡಿದೆ ಎಂದರು.

‘ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ಆದರೆ, ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ತಿಳಿಸಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಎಂ. ಮೈದೂರ, ಪ್ರಭುಗೌಡ ಬಿಷ್ಟಣ್ಣನವರ, ತಾಲ್ಲೂಕು ಪಂಚಾಯ್ತಿ ಸದಸ್ಯ ಯಲ್ಲಪ್ಪ ಮಣ್ಣೂರ, ದಾಸಪ್ಪ ಕರ್ಜಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !