ಶಿಗ್ಗಾವಿ: ಬ್ಯಾಂಕಿನ ಬೆಳವಣಿಗೆಗೆ ಗ್ರಾಹಕರ ಮತ್ತು ಬ್ಯಾಂಕಿನ ಸದಸ್ಯರ ಸಹಕಾರ ಮುಖ್ಯವಾಗಿದೆ. ಬ್ಯಾಂಕ್ ಗ್ರಾಹಕರ ಬೇಡಿಕೆಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಜತೆಗೆ ಹಂತ, ಹಂತವಾಗಿ ಬೆಳವಣಿಗೆಯ ಮಾರ್ಗ ಕಂಡಿದೆ ಎಂದು ಬ್ಯಾಂಕಿನ ನಿರ್ದೇಶಕ ಡಾ.ಆರ್.ಎಸ್.ಅರಳೆಲೆಮಠ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ರೇಣುಕಾಚಾರ್ಯ ಬ್ಯಾಂಕಿನ 30ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ನಮ್ಮ ಬ್ಯಾಂಕ್ ಕಳೆದ 30 ವರ್ಷದಲ್ಲಿ ಹಾವೇರಿ, ಗದಗ, ಧಾರವಾಡ, ಕಾರವಾರ ಸೇರಿ ನಾಲ್ಕು ಜಿಲ್ಲೆಯಲ್ಲಿ ಶಾಖೆ ಹೊಂದಿದೆ. ಅಲ್ಲದೆ ಇನ್ನು ಹೊಸ ಶಾಖೆಗಳನ್ನು ತೆರೆಯುವ ಚಿಂತನೆಯಲ್ಲಿದೆ. ಬ್ಯಾಂಕಿನ ವತಿಯಿಂದ ಉಚಿತ ಆರೋಗ್ಯ ಶಿಬಿರ, ಪ್ರತಿಭಾವಂತಿಗೆ ಪುರಸ್ಕಾರ ಮತ್ತು ಸಹಾಯಧನ ವಿತರಣೆ, ಆರೋಗ್ಯ ಸಂರಕ್ಷಣೆ , ಸ್ವಚ್ಚತಾ ಕಾರ್ಯಕ್ರಮ ಸೇರಿದಂತೆ ಸಾಮಾಜಿಕ, ಶೈಕ್ಷಣಿಕವಾಗಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬ್ಯಾಂಕಿನ ಅಧ್ಯಕ್ಷೆ ಜಯಶ್ರೀವರ್ಷಾ ಯಲಿಗಾರ ಚಾಲನೆ ನೀಡಿ ಮಾತನಾಡಿ, ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಸದಸ್ಯರ ಸಂಖ್ಯೆ ಮತ್ತು ಠೇವಣಿ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿದೆ ಎಂದರು.

ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬ್ಯಾಂಕಿನ ಉಪಾಧ್ಯಕ್ಷ ಮಾಲತೇಶ ಕಂಕನವಾಡ, ನಿರ್ದೇಶಕರಾದ ಫಕ್ಕೀರಪ್ಪ ಯಲಿಗಾರ, ಭರಮಜ್ಜ ನವಲಗುಂದ, ಬಸವರಾಜ ವಾಲಿಶೆಟ್ಟರ, ನಾಗರಾಜ ಬ್ರಹ್ಮಾವರ, ವೀರಣ್ಣ ಬಡ್ಡಿ, ಡಾ.ಐ.ಪಿ.ಕೆ.ಶೆಟ್ಟರ್, ಕಲ್ಲಪ್ಪ ಹೆಸರೂರ, ವಿಜಯಲಕ್ಷ್ಮಿ ಬೇವಿನಮರದ, ವ್ಯವಸ್ಥಾಪಕ ಸಿ.ಎಸ್.ಶ್ಯಾಬಣ್ಣವರ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.