ಬಂಕಾಪುರ (ಶಿಗ್ಗಾವಿ ತಾಲ್ಲೂಕು): ಕುರಿ ಉಣ್ಣಿ ಉತ್ಪಾದನೆ ಹಾಗೂ ಕಂಬಳಿ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಲು ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ನೀಡುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕಿನ ಬಂಕಾಪುರ ಪುರಸಭೆ ಮುಂದೆ ಕುರಿ, ಕುದರಿ ಸಮೇತರಾಗಿ ಡೊಳ್ಳು ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೊಟ್ಟಿಗೇರಿ ಹೊರಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಕೊಟ್ಟಗೇರಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸುಮಾರು ಮೂರು ನೂರು ಕುರಿ, ಐದು ಕುರಿಗಳೊಂದಿಗೆ ಗ್ರಾಮ ಪ್ರಮುಖ ರಸ್ತೆಯಲ್ಲಿ ಡೊಳ್ಳು ಬಾರಿಸುತ್ತಾ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದರು. ನಂತರ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ ಅವರಿಗೆ ಮನವಿ ಸಲ್ಲಿಸಿದರು.

ಸುತ್ತಲಿನ ಗ್ರಾಮಗಳಿಗೆ ಬಂಕಾಪುರ ಪ್ರಮುಖ ವ್ಯಾಪಾರದ ಕೇಂದ್ರ. ಇಲ್ಲಿನ ಅನೇಕರು ಕುರಿ ಉಣ್ಣಿ ಉತ್ಪಾದನೆ ಮಾಡುತ್ತಿದ್ದಾರೆ. ಅಲ್ಲದೆ ಕಂಬಳಿಗಳನ್ನು ತಯಾರು ಮಾಡುತ್ತಿದ್ದಾರೆ. ಆದರೆ ಅವುಗಳನ್ನು ಮಾರಾಟ ಮಾಡುವ ವ್ಯವಸ್ಥೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಯಲ್ಲಿಯೇ ಮಳಿಗೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿದರೂ ಮುಖ್ಯಾಧಿಕಾರಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಿಗೇರಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಮನವಿಗೆ ಸ್ಪಂದಿಸಿ ‘ಮುಂಬರುವ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪ್ರಥಮ ವಿಷಯವಾಗಿ ಚರ್ಚಿಸಿ ಠರಾವು ಪಾಸು ಮಾಡಲಾಗುವುದು’ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂದೆ ಪಡೆದರು.

ಕೊಟ್ಟಿಗೇರಿ ಹೊರಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಗೊರಮ್ಮನವರ, ಬೀರಪ್ಪ ಸಣ್ಣತಮ್ಮಣ್ಣವರ, ಮಾಲತೇಶ ಬಸರೀಕಟ್ಟಿ, ನಾಗಪ್ಪ ಜಂಗಳಿ, ಕಾಳಪ್ಪ ಹುಳ್ಳೆಪ್ಪನವರ, ಪರಸಪ್ಪ ಜಂಗಳಿ, ರಾಜು ದಳವಾಯಿ, ಬಸಪ್ಪ ಕರ್ಜಗಿ, ಸುರೇಶ ಬಸರೀಕಟ್ಟಿ, ಗಿರಿಯಪ್ಪ ಕುಂದಗೋಳ, ಸಿದ್ದಪ್ಪ ಮಟ್ಟಿಗೇರ, ರಾಜು ಜಂಗಳಿ, ಧರ್ಮಣ್ಣ ಗೊರಮ್ಮನವರ, ನಾಗಪ್ಪ ಬಸರೀಕಟ್ಟಿ, ಯಲ್ಲಪ್ಪ ಮಾಸೂಂಡಿ ಸೇರಿದಂತೆ ಕೊಟ್ಟಿಗೇರಿ ಹೊರಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳು, ಕುರಿಗಾರರು ಹಾಗೂ ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.