ಶಿಗ್ಗಾವಿ: ಸುಡು ಬಿಸಿಲಿನ ತಾಪಮಾನ ಹೆಚ್ಚಾಗುತ್ತಾ ಸಾಗಿದ್ದು, ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಪುರ ಸಭೆ ವತಿಯಿಂದ 30 ದಿನಕ್ಕೊಮ್ಮೆ ನೀರು ನೀಡುತ್ತಿದ್ದಾರೆ. ಅದರಿಂದಾಗಿ ನೀರಿಗಾಗಿ ಹಾಹಾಕಾರ ನಡೆದಿದೆ. ಆದರೂ ಅಧಿಕಾರಿಗಳು ಈ ಕಡೆ ಗಮನಿಸುತ್ತಿಲ್ಲ ಎಂದು ಆಗ್ರಹಿಸಿ ತಾಲ್ಲೂಕಿನ ಬಂಕಾಪುರ ಪಟ್ಟಣದ 6ನೇ ವಾರ್ಡಿನ ಮಹಿಳೆಯರು, ಮಕ್ಕಳು ಪುರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಕಳೆದ 30 ದಿನಗಳ ಹಿಂದೆ ನೀರು ಬಿಡಲಾಗಿತ್ತು. ಈ ವರೆಗೆ ಇಂದು ನಾಳೆ ನೀರು ಬರಲಿದೆ ಎಂದು ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಆದರೆ ಈ ವರೆಗೆ ಪುರಸಭೆ ಅಧಿಕಾರಿಗಳು ಕುಡಿಯುವ ನೀರು ಸರಬುರಾಜು ಮಾಡುತ್ತಿಲ್ಲ. ಕುಡಿಯುವ ನೀರು ತರಲು ಇಡೀ ದಿನ ಕೆರೆ, ಬಾವಿ ಹಾಗೂ ಹೊಂಡಗಳಿಗೆ ಅಲೆ ದಾಡುವಂತಾಗಿದೆ. ಅಧಿಕಾರಿಗಳು ನೋಡಿ ನೋಡದಂತೆ ಕಣ್ಮಿಚ್ಚಿಕೊಂಡಿದ್ದಾರೆ ಎಂದು ಪ್ರತಿಭಟನಾ ನಿರತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮನೆಯಲ್ಲಿ ಸಂಗ್ರಹಿಸಿ ಇಟ್ಟಿರುವ ನೀರು ದುರ್ವಾಸನೆ ಸೂಸುತ್ತಿದೆ. ಅಂತಹ ನೀರನ್ನು ಕಾಯಿಸಿ ಆರಿಸಿ ಮತ್ತು ಸೋಸಿ ಕುಡಿಯುತ್ತಿದ್ದೇವೆ. ಎಲ್ಲೆಡೆ ಅಲೆದಾಡಿದರು ನೀರು ಸಿಗುತ್ತಿಲ್ಲ. ಕೂಲಿನಾಲಿ ಬಿಟ್ಟು ಬರಿ ಕುಡಿಯುವ ನೀರು ತರಲು ಹೋದರು ಸಹ ಒಂದು ದಿನ ಕಳೆದರು ಒಂದು ಕೂಡ ನೀರು ಸಿಗುತ್ತಿಲ್ಲ. ಸುಡು ಬಿಸಿಲು ಲೆಕ್ಕಿಸಿದೆ. ಮಕ್ಕಳು ಸಹ ಹನಿ ನೀರಿಗಾಗಿ ಪರದಾಡುವಂತಾಗಿದೆ. ಮನುಷ್ಯರು ಎಲ್ಲ ನೀರು ಸಿಗುತ್ತವೆ ಅಲ್ಲಗೆ ಹೋಗಿ ನೀರು ಕುಡಿದು ದಾಹ ಇಂಗಿಸುತ್ತಿದ್ದೇವೆ. ಎತ್ತು, ಎಮ್ಮೆ ದನಕರುಗಳು ಸೇರಿದಂತೆ ಮೂಕ ಪ್ರಾಣಿಗಳಿಗೆ ಎಲ್ಲಿಂದ ನೀರು ಹಾಕಬೇಕು. ಹೀಗಾಗಿ ದನಕರುಗಳು ಸಹ ನೀರಿಗಾಗಿ ಪರದಾಡುತ್ತಿದೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದರು.

ನಿವಾಸಿಗಳಾದ ನೀಲವ್ವ ಜಾಡ ಗೊಪ್ಪದ, ಮಂಜುಳಾ ಬಿರಿಜಕ್ಕರ, ರೇಣುಕಾ ಬಾಗವಾನವರ, ಅಕ್ಕವ್ವ ಹಡಗಲಿ, ಅನುಸೂಯಾ ಮುದ್ರಗಣಿ, ಲಕ್ಷ್ಮವ್ವ ಜಾಡಗೊಪ್ಪದ, ಲಲಿತವ್ವ ಹಾಲಬಾವಿ, ಶಾರವ್ವ ಭಾಗವಾನವರ, ಜ್ಯೋತಿ ರಾಮಾಪುರ ಸೇರಿದಂತೆ ವಾರ್ಡಿನ ಮಹಿಳೆಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-22-1152262894

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.