ಮಕ್ಕಳ ಆಕರ್ಷಣೆಯತ್ತ ಬನ್ನಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

7

ಮಕ್ಕಳ ಆಕರ್ಷಣೆಯತ್ತ ಬನ್ನಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

Published:
Updated:
Deccan Herald

ಬ್ಯಾಡಗಿ: ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶಾತಿ ಹೆಚ್ಚಿಸಿಕೊಳ್ಳಲು ಶಿಕ್ಷಕರು ವೈಜ್ಞಾನಿಕ ಹಾಗೂ ಗುಣಾಮಟ್ಟದ ಶಿಕ್ಷಣದ ಮೊರೆ ಹೋಗಿದ್ದಾರೆ. 

ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ 15 ವರ್ಷದ ಹಿಂದೆಯೇ ದತ್ತಿ ನಿಧಿ ಸ್ಥಾಪಿಸಿದ್ದೆವು. ಈಗ ₹1.25 ಲಕ್ಷ ಸಂಗ್ರಹವಾಗಿದೆ. ಈ ಹಣದ ಬಡ್ಡಿಯಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿದೆ. ವಿದ್ಯಾರ್ಥಿಗಳೇ ತಯಾರಿಸಿದ 20ಕ್ಕೂ ಹೆಚ್ಚು ವರ್ಕಿಂಗ್ ಮಾಡೆಲ್‌ಗಳ ಮೂಲಕವು ಬೋಧನೆ ಮಾಡಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಎಂ.ಎಂ.ಪಾಟೀಲ ಹೇಳಿದರು.

ಶಾಲೆಯಲ್ಲಿ ರೀಡಿಂಗ್ ಕಾರ್ನರ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ, ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ಮೈಕ್ರೋಸ್ಕೋಪ್,  ಮಾನವನ ಅಂಗಾಂಗಗಳ ಮಾದರಿಗಳು, ಸೈನ್ಸ್ ಚಾರ್ಟ್‌ಗಳು, ರಸಾಯನ ಶಾಸ್ತ್ರದ ಪ್ರಯೋಗಕ್ಕೆ ಬೇಕಾದ ರಾಸಾಯನಿಕ ವಸ್ತುಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಅವುಗಳನ್ನು ಉಪಯೋಗಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು. 

ಅಲ್ಲದೇ, ಅಮೀಟರ್, ವೋಲ್ಟಾ ಮೀಟರ್, ಕ್ಯಾಲಿಫರ್ಸ್, ಥರ್ಮಾಮೀಟರ್, ಸೋಲಾರ್ ಸಿಸ್ಟಮ್ ಮಾಡೆಲ್‌ಗಳೂ ಇವೆ. ಇದರಿಂದ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಸುಲಲಿತವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಹೀಗಾಗಿ ದಾಖಲಾತಿ  ಹೆಚ್ಚಾಗಿದೆ ಎಂದು ಟಿಜಿಟಿ (ವಿಜ್ಞಾನ) ಶಿಕ್ಷಕ ಶೆಲ್ವರಾಜ ತಿಳಿಸಿದರು. 

ರಸ್ತೆ ವಿಭಜಕದಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನೆ  ಹಾಗೂ ಟೋಲ್‌ ಗೇಟ್‌ಗಳಲ್ಲಿ ಡೀಸೆಲ್‌ ಉಳಿತಾಯಕ್ಕೆ ಕ್ರಮ ಕೈಗೊಳ್ಳುವ ಪ್ರಾತ್ಯಕ್ಷಿಕೆಗಳನ್ನು ಕಳೆದ ಬಾರಿಯ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು ಎಂದು ವಿವರಿಸಿದರು.

ಒಟ್ಟು 8 ಮಂದಿ ಶಿಕ್ಷಕರಿದ್ದು,  1ನೇ ತರಗತಿಯಿಂದ 8ನೇ ತರಗತಿವರೆಗೆ ತರಗತಿಗಳಿವೆ. ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಮೇಶಪ್ಪ ಕುರವತ್ತಿ ವಿವರಿಸಿದರು.

ವಿಜ್ಞಾನ ಹಾಗೂ ಗಣಿತ ವಿಷಯಗಳ ಕಲಿಕೆಯು ಈಗ ಸರಳವಾಗಿದ್ದು, ಕಲಿಯಲು ಆಸಕ್ತಿ ಹೆಚ್ಚಿದೆ ಎಂದು ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಶಿವರಾಜ ಸರ್ವಂದ ಹಾಗೂ ಭರತಕುಮಾರ ದೊಡ್ಮನಿ ತಿಳಿಸಿದರು.

ಗ್ರಾಮೀಣ ಭಾಗದ ಮಕ್ಕಳು ವಿಜ್ಞಾನ ವಿಷಯದ ಕಡೆಗೆ ಆಕರ್ಷಿತರಾಗಲು ಮಾದರಿಗಳು (ವರ್ಕಿಂಗ್ ಮಾಡೆಲ್) ಸಹಕಾರಿ
- ಎಂ.ಮಂಜುನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !