ಶುಕ್ರವಾರ, ಡಿಸೆಂಬರ್ 4, 2020
21 °C

ಬಸವೇಶ್ವರ ಮೂರ್ತಿ ಭಗ್ನ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕು ಬೀಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿದ್ದನ್ನು ಖಂಡಿಸಿ ಹಾವೇರಿ ಜಿಲ್ಲಾ ಬಸವ ಬಳಗ, ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾ, ಜಾಗೃತಿ ಲಿಂಗಾಯತ ಮಹಾಸಭಾ ಶಾಖೆ, ಬಸವದಳ ಹಾವೇರಿ, ಬಸವಕೇಂದ್ರ ಹಾವೇರಿ, ರಾಷ್ಟ್ರೀಯ ಬಸವದಳ ಹಾವೇರಿ, ಅಕ್ಕನ ಬಳಗ, ಕದಳಿ ವೇದಿಕೆಯ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ತಹಶೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು.

ವಕೀಲರಾದ ಜಯದೇವ ಕೆರೂಡಿ ಮಾತನಾಡಿ, ‘ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಬೀಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರರ ಮೂರ್ತಿಯನ್ನು ಕಿಡಗೇಡಿಗಳು, ದುಷ್ಕರ್ಮಿಗಳು ಭಗ್ನಗೊಳಿಸಿರುತ್ತಾರೆ. ಈ ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾದ ಅಧ್ಯಕ್ಷ ಶಂಭು ಕಳಸದ ಮಾತನಾಡಿ, ‘ಜ್ಯಾತ್ಯತೀತೆಯ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಾಧು-ಸಂತರ, ಶರಣ-ಮಹಾತ್ಮರು ಹಾಗೂ ಸಾಧಕರ ಪ್ರತಿಮೆಗಳಿಗೆ ಅವಮಾನ ಎಸಗುತ್ತಿರುವ ಇಂತಹ ದುಷ್ಟರನ್ನು ಬಂಧಿಸಿ ಅವರ ವಿರುದ್ಧ ಕಾನೂನು ರೀತಿ ಶಿಕ್ಷಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಜಯಶ್ರೀ ಶಿವಪೂರ, ಶಿವಯೋಗಪ್ಪ ಬೆನ್ನೂರ, ಶಿವಬಸಪ್ಪ ಮುದ್ದಿ, ಮುರಿಗೆಪ್ಪ ಕಡೆಕೊಪ್ಪ, ಸಿ.ಎನ್. ರೊಡ್ಡನವರ, ಉಮೇಶ ಪಂಪಣ್ಣನವರ, ಜಗದೀಶ ಅಂಕಲಕೋಟಿ, ಸತೀಶ ಕಾಟೇನಹಳ್ಳಿ, ಸುರೇಶ ಚಲವಾದಿ, ಸಚಿನ ಕಾಳೆ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.